ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಮರಿ ಜೊತೆ ಚಿಂಪಾಂಜಿ: ವೈರಲ್‌ ಆಯ್ತು ವಿಡಿಯೊ

Last Updated 13 ಅಕ್ಟೋಬರ್ 2022, 9:27 IST
ಅಕ್ಷರ ಗಾತ್ರ

ಹಸು, ನಾಯಿ, ಬೆಕ್ಕನ್ನು ಪ್ರೀತಿಯಿಂದ ಸಾಕುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ. ಅದನ್ನು ಕಂಡರೆ ಭಯಪಡುವವರೂ ಇದ್ದಾರೆ. ಇದೇ ವಿದೇಶದಲ್ಲಿ ಕೋತಿ, ಚಿಂಪಾಂಜಿ ಸಾಕುವ ಒಂದು ವರ್ಗವೇ ಇದೆ.

ಮನುಷ್ಯನಿಗೆ ಹೊಂದಿಕೊಂಡರೆ ಸಾಕಷ್ಟು ಪ್ರಾಣಿಗಳು ಮನುಷ್ಯರಂತೆಯೇ. ಆದರೂ ಹುಲಿ, ಸಿಂಹ ಎಂದರೆ ಎಲ್ಲರಿಗೂ ಭಯ. ಕೇವಲ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳು ಕೂಡ ಹುಲಿ, ಸಿಂಹಗಳಂತಹ ಕಾಡುಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳುತ್ತವೆ.

ಚಿಂಪಾಂಜಿಯೊಂದು ಹುಲಿ ಮರಿ ಜೊತೆ ಆಟ ಆಡುತ್ತಿರುವ ವಿಡಿಯೊವೀಗ ಅಂತರ್ಜಾಲದಲ್ಲಿ ವೈರಲ್‌ ಆಗಿದೆ. ವಿದೇಶಿ ಮಹಿಳೆಯೊಬ್ಬರು ಮೋಕ್ಷಬೈಬಿ ಟೈಗರ್‌ ಎನ್ನುವ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಈ ವಿಡಿಯೊ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಚಿಂಪಾಂಜಿ ಮತ್ತು ಹುಲಿ ಮರಿ ಮುದ್ದಾಗಿ ಆಟ ಆಡುವ ದೃಶ್ಯ ನೆಟ್ಟಿಗರನ್ನು ಆಕರ್ಷಿಸಿದೆ. ಅವರು ಸಾಕಿರುವ ಚಿಂಪಾ ಎರಡು ಹುಲಿಮರಿಗಳ ಜೊತೆ ಸೊಗಸಾಗಿ ಆಟವಾಡುತ್ತಿದೆ. ಸಾಕಷ್ಟು ಜನ ಇದಕ್ಕೆ ಅದ್ಬುತವೆಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT