ಶುಕ್ರವಾರ, ಜುಲೈ 30, 2021
20 °C

ಗೋಲ್‌ಗಪ್ಪಾ ಹಾರ-ಕಿರೀಟದಲ್ಲಿ ಕಂಗೊಳಿಸಿದ ವಧು; ವಿಡಿಯೊ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಸುಂದರ ಕ್ಷಣ. ಅದನ್ನ ಮತ್ತಷ್ಟು ಸುಂದರಗೊಳಿಸಲು ಜನ ಅನೇಕ ವಿಧದ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಇಲ್ಲೊಂದು ಮದುವೆಯಲ್ಲಿ ಗೋಲ್‌ಗಪ್ಪಾವನ್ನೇ ಆಭರಣವನ್ನಾಗಿ ಮಾಡಿಕೊಂಡ ವಧುವಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಧು ಈ ವಿಶೇಷ ದಿನದಂದು ತನ್ನ ನೆಚ್ಚಿನ ತಿಂಡಿಯ ಬಗೆಗಿನ ಪ್ರೀತಿಯನ್ನು ವಿಶಿಷ್ಟ ರೀತಿಯಲ್ಲಿ ಹೇಳಲು ಮುಂದಾಗಿದ್ದಳು. ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಧುವಿನ ವಿಡಿಯೊದಲ್ಲಿ ಗೋಲ್‌ಗಪ್ಪಾದಿಂದ ಮಾಡಿದ ಹಾರ ಮತ್ತು ಕಿರೀಟವನ್ನು ಧರಿಸಿ ಸಂಭ್ರಮಿಸುತ್ತಿರುವುದು ಕಂಡುಬಂದಿದೆ.

ವಧುವಿನ ಮೇಕಪ್ ಕಲಾವಿದೆ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ಸುಂದರವಾದ ವಧು ಅಕ್ಷಯ ಮತ್ತು ವರ ಅಭಿಷೇಕ್ ಅವರಿಗೆ ಅಭಿನಂದನೆಗಳು. ಭಾರತೀಯ ವಿವಾಹದಲ್ಲಿನ ಇಂತಹ ಆಟಗಳು ನಿಜವಾಗಿಯೂ ಸಾಂಪ್ರದಾಯಿಕ ಮತ್ತು ಇಂತಹ ಉತ್ಸಾಹವು ಭಾರತೀಯ ಮದುವೆಯ ಅವಶ್ಯಕ ಭಾಗವಾಗಿದೆ' ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ ಹಪ್ಪಳಗಳನ್ನು ಸಾಲಾಗಿ ಜೋಡಿಸಿ ವಧುವಿನ ತಲೆಯ ಮೇಲಿಟ್ಟು ಪುಡಿ ಪುಡಿ ಮಾಡುವ ದೃಶ್ಯವೂ ಸೆರೆಯಾಗಿದೆ. ಈ ವೇಳೆ ಸಂಬಂಧಿಕರೆಲ್ಲರೂ ಸಂಭ್ರಮಿಸುತ್ತಿರುವುದು ಮದುವೆಯ ಸಂತೋಷವನ್ನು ಇಮ್ಮಡಿಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು