ಮಾಲ್ಡೀವ್ಸ್ನಲ್ಲಿ ಬ್ರಿಟಿಷ್ ಪ್ರವಾಸಿಗ ಮಾರ್ಟಿನ್ ಲೆವಿಸ್ ಅವರು ಜೌಗು ಪ್ರದೇಶದ ಕೆಸರು ಗುಂಡಿಯಲ್ಲಿ ಬೀಳುವ ವಿಡಿಯೊ ವೈರಲ್ ಆಗಿದೆ.

ಕಳೆದ ವಾರ ಈ ವಿಡಿಯೊ ಟಿಕ್ಟಾಕ್ನಲ್ಲಿ 2.80 ಕೋಟಿ ವೀಕ್ಷಣೆ ಪಡೆದಿದೆ. ಇನ್ಸ್ಟಾಗ್ರಾಂನಲ್ಲಿ ಕೂಡ 60 ಲಕ್ಷ ವೀಕ್ಷಣೆ ಪಡೆದಿದೆ.

ಮಾರ್ಟಿವಿನ್ ಲೆವಿಸ್ ಅವರು ಪತ್ನಿ ರೆಚೆಲಾ ಜತೆಗೂಡಿ ಕಳೆದ ವಾರ ಮಾಲ್ಡೀವ್ಸ್ಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆಜೌಗು ಪ್ರದೇಶವನ್ನು ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ’ಈ ಕೆಸರನ್ನು ಬಟ್ಟೆ ಹಾಗೂ ಚಪ್ಪಲಿಗಳು ಕೊಳಕಾಗದಂತೆ ದಾಟುತ್ತೇನೆ ನೋಡು’ ಎಂದು ಪತ್ನಿಗೆ ಮಾರ್ಟಿನ್ ಹೇಳುತ್ತಾರೆ. ಮತ್ತೊಂದು ಬಂದಿಯಲ್ಲಿ ಮಾರ್ಟಿನ್ ಮಾತನ್ನು ಕೇಳುತ್ತ ರೆಚೆಲಾ ವಿಡಿಯೊ ಶೂಟ್ ಮಾಡುತ್ತಿರುತ್ತಾರೆ.

ಚಪ್ಪಲಿಗಳನ್ನು ಕಳಚಿ, ಮಾರ್ಟಿನ್ ಎರಡು ಹೆಜ್ಜೆ ಮುಂದೆ ಇಡುತ್ತಾರೆ. ಆಗ ಇದ್ದಕ್ಕಿಂತೆ ಪೂರ್ತಿಯಾಗಿ ಮುಳುಗುತ್ತಾರೆ, ಇದನ್ನು ಶೂಟ್ ಮಾಡುತ್ತಿದ್ದ ಪತ್ನಿ ಜೋರಾಗಿ ನಗೆಗಡಲಿನಲ್ಲಿ ತೇಲುತ್ತಾರೆ. ಇದು ವಿಡಿಯೊ ವೀಕ್ಷಣೆ ಮಾಡುವಾಗ ಕೇಳಿಸುತ್ತದೆ. 10 ಸೆಕೆಂಡ್ಗಳ ಬಳಿಕ ಮಾರ್ಟಿನ್ ಕೆಸರಿನಿಂದ ಮೇಲೆ ಬರುತ್ತಾರೆ.

ಗಂಡ ಮುಳುಗಿದರೂ ಸಹಾಯಕ್ಕೆ ಬರದೇ ಅಥವಾ ಬೇಸರು ವ್ಯಕ್ತಪಡಿಸದೆ ರಚೆಲಾ ನಗುತ್ತಿರುವುದನ್ನು ಕೆಲ ನೆಟ್ಟಿಗರು ಟೀಕಿಸಿದ್ದಾರೆ. ಅದೃಷ್ಟವಶಾತ್ ಗುಂಡಿ ಆಳ ಇರದಿದ್ದರಿಂದ ಮಾರ್ಟಿನ್ ಬದುಕಿದರೂ ಎಂದು ಕೆಲವರು ಹೇಳಿದ್ದಾರೆ. ಒಟ್ಟಾರೆ, ರೆಚೆಲಾ ನಡೆಗೆ ಟೀಕೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.