ಗುರುವಾರ , ಏಪ್ರಿಲ್ 2, 2020
19 °C
ವಿಡಿಯೊ ಸುದ್ದಿ

ಎದೆಗೆ ಚಾಕು ತಾಕಿಸಿ ರಕ್ತಾರ್ಪಣೆ ಮಾಡಿದ ಚೌಡೇಶ್ವರಿ ದೇವಿ ಭಕ್ತರು: ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ಚೌಡೇಶ್ವರಿ ದೇವಿಯ ಭಕ್ತರು ಎದೆಗೆ ಚಾಕು ತಾಕಿಸಿ, ದೇವಿಗೆ ರಕ್ತಾರ್ಪಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರಾಮದಲ್ಲಿ ಭಾನುವಾರ (ಡಿ.29) ತೊಗಟವೀರ ಜನಾಂಗದವರು ಆಯೋಜಿಸಿದ್ದ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವದ ಬಲಿಹಾರ ಪೂಜೆಯಲ್ಲಿ ಈ ವಿಶಿಷ್ಟ ಆಚರಣೆ ನಡೆದಿದೆ.

ಅಲ್ಲದೇ, ಮಹಿಳೆಯರು ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿರುವುದು ಹಾಗೂ ಮಕ್ಕಳು ದೀಪಗಳನ್ನು ತಲೆಯ ಮೇಲೆ ಹೊತ್ತು ಸಾಗಿರುವ ದೃಶ್ಯಗಳು ಗಮನ ಸೆಳೆದಿವೆ.

ಉತ್ಸವ ಮೂರ್ತಿಯ ಮೆರವಣಿಗೆ ನಂತರ ದೇವಿಗೆ ಕುರಿ ಬಲಿ ನೀಡಿ, ಬಾಡೂಟ ಸವಿಯುವ ಸಂಪ್ರದಾಯ ದಶಕಗಳಿಂದ ನಡೆದು ಬಂದಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು