ಗುರುವಾರ , ಆಗಸ್ಟ್ 5, 2021
28 °C

ಕಣ್ಣಾನೆ ಕಣ್ಣೇ…. ಹೊಸ ಲುಕ್‌ನಲ್ಲಿ ಮಗಳ ಜತೆ ಮಹೇಂದ್ರ ಸಿಂಗ್ ಧೋನಿ!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

CSK Twitter

ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಸದಾ ವಿವಿಧ ಸ್ಟೈಲಿಶ್ ಲುಕ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಚೆನ್ನೈ ಸೂಪರ್ ಕಿಂಗ್ಸ್, ಎಂ. ಎಸ್. ಧೋನಿ ಅವರ ನ್ಯೂ ಲುಕ್ ಫೋಟೊ ಒಂದನ್ನು ತಂಡದ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಧೋನಿ, ಮಗಳು ಝಿವಾ ಜತೆಗೆ ರಜೆ ಕಳೆಯುತ್ತಿರುವ ಚಿತ್ರ ಇಂಟರ್‌‌ನೆಟ್‌ನಲ್ಲಿ ವೈರಲ್ ಆಗಿದ್ದು, ಧೋನಿಯ ಮೀಸೆ ಕುರಿತು ಜೋರಾದ ಚರ್ಚೆ ನಡೆದಿದೆ.

ಧೋನಿ ಹೇರ್‌ಸ್ಟೈಲ್ ಪ್ರತಿ ಬಾರಿ ಸುದ್ದಿಯಾಗುತ್ತಿದ್ದರೆ, ಈ ಬಾರಿ ‌ಮೀಸೆಯ ಕುರಿತು ಜನರು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಧೋನಿಯ ಹೊಸ ಸ್ಟೈಲಿಶ್ ಲುಕ್ ಅನ್ನು ಸಿಂಘಂ ಚಿತ್ರಕ್ಕೆ ಹೋಲಿಸಿದರೆ, ಮತ್ತೆ ಕೆಲವರು ಧೋನಿ ಹೊಸ ಮೀಸೆಯ ವಿನ್ಯಾಸ ಚೆನ್ನಾಗಿ ಒಪ್ಪುತ್ತದೆ, ಅದನ್ನೇ ಮುಂದುವರಿಸಿ ಎಂದಿದ್ದಾರೆ.

ಸಾಕ್ಷಿ ಧೋನಿ ಕೂಡ ಕುಟುಂಬದ ವಿಹಾರದ ಕ್ಷಣಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು