ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ಮೇಲಿನ ಅರೇಬಿಕ್‌ ಅಕ್ಷರವನ್ನು ಕುರಾನ್ ಸಾಲುಗಳೆಂದು ತಿಳಿದು ಮಹಿಳೆಗೆ ಧಮ್ಕಿ

Published 26 ಫೆಬ್ರುವರಿ 2024, 12:57 IST
Last Updated 26 ಫೆಬ್ರುವರಿ 2024, 12:57 IST
ಅಕ್ಷರ ಗಾತ್ರ

ಲಾಹೋರ್(ಪಾಕಿಸ್ತಾನ): ಮಹಿಳೆಯೊಬ್ಬರು ಧರಿಸಿದ್ದ ಬಟ್ಟೆಯ ಮೇಲಿನ ಅರೇಬಿಕ್ ಅಕ್ಷರಗಳನ್ನು ಕುರಾನ್‌ನ ಸಾಲುಗಳೆಂದು ತಿಳಿದು ಗುಂಪೊಂದು ಮಹಿಳೆಗೆ ನಿಂದಿಸಿ, ಬೆದರಿಕೆ ಹಾಕಿರುವ ಘಟನೆ ಲಾಹೋರ್‌ನಲ್ಲಿ ನಡೆದಿದೆ. ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.‌

ಮಹಿಳೆ ಮತ್ತು ಆಕೆಯ ಪತಿ ರೆಸ್ಟೋರೆಂಟ್‌ವೊಂದಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆಯನ್ನು ಸುತ್ತುವರಿದ ಗುಂಪು ತಕ್ಷಣ ಬಟ್ಟೆ ಬದಲಿಸುವಂತೆ ಒತ್ತಾಯಿಸಿದ್ದಾರೆ. ಏನು ಮಾಡುವುದೆಂದು ತೋಚದೆ ಮಹಿಳೆ ಮುಖದ ಮೇಲೆ ಕೈಯಿಟ್ಟುಕೊಂಡು ಕುಳಿತಿರುವುದು ದೃಶ್ಯದಲ್ಲಿ ಕಾಣಬಹುದಾಗಿದೆ.

ಸ್ಥಳಕ್ಕೆ ಬಂದ ಮಹಿಳಾ ಪೊಲೀಸ್ ಅಧಿಕಾರಿ ಸ್ಥಳದಲ್ಲಿದ್ದವರಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ. ತಕ್ಷಣ ರೆಸ್ಟೋರೆಂಟ್ ಒಳಗೆ ಹೋದ ‍ಪೊಲೀಸ್, ಮಹಿಳೆಯನ್ನು ಜೋಪಾನವಾಗಿ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಈ ವಿಡಿಯೊವನ್ನು ಪಂಜಾಬ್ ಪೊಲೀಸರು ಹಂಚಿಕೊಂಡಿದ್ದು, ಮಹಿಳಾ ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

‘ಯಾರನ್ನು ಅವಮಾನ ಮಾಡುವ ಉದ್ದೇಶದಿಂದ ಬಟ್ಟೆಯನ್ನು ಧರಿಸಿಲ್ಲ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT