ಬುಧವಾರ, ಸೆಪ್ಟೆಂಬರ್ 23, 2020
21 °C

ಕಪಿಲ್ ದೇವ್ ಅವತಾರದಲ್ಲಿ ಮಿಂಚಿದ್ದ ರಣವೀರ್ ಸಿಂಗ್‌ ಕೈಯಲ್ಲಿ ಸೊಳ್ಳೆ ಬ್ಯಾಟ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನಲ್ಲಿ ತಯಾರಾಗುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್‌ ದೇವ್‌ ಅವರ ಜೀವನಾಧಾರಿತ ಸಿನಿಮಾ ‘83’ ಚಿತ್ರದಲ್ಲಿ ಕಪಿಲ್‌ ಪಾತ್ರದಲ್ಲಿ ರಣವೀರ್‌ ಸಿಂಗ್‌ ಕಾಣಿಸಿಕೊಳ್ಳುತ್ತಿದ್ದಾರೆ. ಕಪಿಲ್‌ ದೇವ್‌ ಅವರ ನೆಚ್ಚಿನ ನಟರಾಜ ಶಾಟ್‌ನಲ್ಲಿ (ಬ್ಯಾಟಿಂಗ್‌ ಶೈಲಿ) ಕಾಣಿಸಿಕೊಂಡಿರುವ ರಣವೀರ್‌ ಸಿಂಗ್ ಅವರ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದೆ.

ಥೇಟ್‌ ಕಪಿಲ್‌ರಂತೆಯೇ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ಅವರ ಪೋಟೊವನ್ನು ನೆಟ್ಟಿಗರು ಫೋಟೊಶಾಪ್‌ನಲ್ಲಿ ಎಡಿಟ್ ಮಾಡಿ ವಿವಿಧ ರೀತಿಯ ಬಟ್ಟೆಗಳನ್ನು ತೊಡಿಸಿದ್ದಾರೆ. ಅಲ್ಲದೆ ತ್ರಿಭುಜಾಕೃತಿಯನ್ನು ಬಳಸಿ ವರ್ಣರಂಜಿತ ವಿನ್ಯಾಸ ನೀಡಿದ್ದಾರೆ. ಬ್ಯಾಟ್ ಬದಲಿಗೆ ದಿನಬಳಕೆಯ ಸೊಳ್ಳೆ ಬ್ಯಾಟ್‌ನಿಂದ ಹಿಡಿದು ಕಸಬರಿಗೆಯನ್ನು ಕೂಡ ರಣವೀರ್ ಕೈಗೆ ನೀಡಿದ್ದಾರೆ.

ನಟರಾಜ ಶೈಲಿಯಲ್ಲಿ ಎಡಗಾಲನ್ನು ಮೇಲೆತ್ತಿ ಬ್ಯಾಟನ್ನು ಬಲವಾಗಿ ಬೀಸಿ ಚೆಂಡನ್ನೇ ದಿಟ್ಟಿಸುತ್ತಿರುವ ಫೋಟೊವನ್ನು ತಮಗೆ ಬೇಕಾದಂತೆ ಎಡಿಟ್ ಮಾಡುವ ಮೂಲಕ ತಾಮುಂದು ನಾಮುಂದು ಎಂದು ಫೋಟೊಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಅವುಗಳ ಕೆಲ ಇಂಟರೆಸ್ಟಿಂಗ್ ಫೋಟೊ ಟ್ವೀಟ್‌ಗಳು ಇಲ್ಲಿವೆ ನೋಡಿ...

ಪುಣೆಯ ಅಲ್ಕಾ ಟಾಕೀಸ್ ಚೌಕ್‌ನಲ್ಲಿ ಕಂಡುಬಂದ ಕಪಿಲ್ ದೇವ್ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಕೇಸರಿ ಬಾವುಟ ಹಿಡಿದು ಡ್ಯಾನ್ಸ್ ಮಾಡಿದರು ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಲೋಕಲ್ ಟ್ರೈನ್‌ಗಳಲ್ಲಿ ಪ್ರಯಾಣಿಸುವ ಮುಂಬೈಯಿಗರ ಪ್ರತಿದಿನದ ಹೋರಾಟವಿದು ಎಂದು ತುಂಬಿ ತುಳುಕುತ್ತಿರುವ ಟ್ರೈನಿನ ಬಾಗಿಲಲ್ಲಿ ರಣವೀರ್ ಸಿಂಗ್ ಫೋಟೊ ಇರುವಂತೆ ಮಾಡಿದ ಫೋಟೊವನ್ನು ಹಂಚಿಕೊಂಡಿದ್ದಾರೆ.

ಗುಜರಾತ್‌ನ ನೃತ್ಯ ಪ್ರಕಾರಗಳಲ್ಲೊಂದಾದ ಗರ್ಭಾ ನೃತ್ಯದಲ್ಲಿ ರಣವೀರ್ ಸಿಂಗ್ ಎಂದು ಬರೆದಿರುವ ಟ್ವೀಟಿಗರೊಬ್ಬರು ನೃತ್ಯದ ಬಟ್ಟೆಯಲ್ಲಿರುವ ಸಿಂಗ್ ಫೋಟೊವನ್ನು ಹಂಚಿಕೊಂಡಿದ್ದಾರೆ.

ಶೂಟಿಂಗ್ ಮುಗಿದ ನಂತರ ರಣವೀರ್ ಸಿಂಗ್ ಎಂಬ ಬರಹದೊಂದಿಗೆ ಮನೆಯ ಸೋಫಾದಲ್ಲಿ ಪತ್ನಿ ದೀಪಿಕಾ ಪಡುಕೋಣೆ ಕುಳಿತಿರುವ ಮತ್ತು ರಣವೀರ್ ಸಿಂಗ್ ಜಾಡನ್ನು ತೆಗೆಯುತ್ತಿರುವ ರೀತಿಯ ಫೋಟೊವನ್ನು ಹಂಚಿಕೊಂಡಿದ್ದಾರೆ.

Prism pic.twitter.com/eQn2LheQAT

Natraj Shot pic.twitter.com/r3WawzfhNw

ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ನಡೆಸಿರುವ ರಣವೀರ್‌, ಕಪಿಲ್‌ರ ಗುಣ, ಸ್ವಭಾವದ ಸೂಕ್ಷ್ಮ ವಿಷಯಗಳ ಬಗ್ಗೆ ತಿಳಿದುಕೊಳ್ಳಲೆಂದೇ ಅವರ ನಿವಾಸದಲ್ಲಿಯೇ ಉಳಿದಿದ್ದರು ಮತ್ತು ಕಪಿಲ್‌ ಅವರಿಂದಲೇ ಕ್ರಿಕೆಟ್‌ ತರಬೇತಿಯನ್ನೂ ಪಡೆದುಕೊಂಡಿದ್ದಾರೆ.

‘83’ ಸಿನಿಮಾವನ್ನು ಕಬೀರ್‌ ಖಾನ್‌ ನಿರ್ದೇಶಿಸುತ್ತಿದ್ದು, ಇದರಲ್ಲಿ ರಣವೀರ್‌ ಪತ್ನಿ ದೀಪಿಕಾ ಪಡುಕೋಣೆಯೇ ಕಪಿಲ್‌ ಪತ್ನಿ ರೋಮಿ ದೇವ್‌ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು