ಬಹರಾಂಪುರ್, ಒಡಿಶಾ: ರಾಮಾಯಣಕ್ಕೆ ಸಂಬಂಧಿಸಿದ ನಾಟಕ ಮಾಡುವಾಗ ರಾಕ್ಷಸ ಪಾತ್ರದಾರಿಯೊಬ್ಬ ವೇದಿಕೆಯಲ್ಲಿಯೇ ಜೀವಂತ ಹಂದಿಯನ್ನು ಕೊಂದು ಅದರ ಹೊಟ್ಟೆಯನ್ನು ಸೀಳಿ ಹಸಿ ಮಾಂಸವನ್ನು ತಿಂದಿರುವ ಘಟನೆ ಒಡಿಶಾದ ಬಹರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.

ಬಹರಾಂಪುರದ ಹಿಂಜಿ ಪೊಲೀಸ್ ಠಾಣೆಯ ರಾಲಾಬ್ ಎಂಬ ಹಳ್ಳಿಯಲ್ಲಿ ನವೆಂಬರ್ 24 ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ರಾಕ್ಷಸ ಪಾತ್ರದಾರಿಯಾಗಿದ್ದ ಭೀಮಾಂಧರ್ ಗೌಡಾ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷವೆಂದರೆ ಈ ವಿಚಾರ ಸದ್ಯ ನಡೆಯುತ್ತಿರುವ ಒಡಿಶಾ ವಿಧಾನಸಭೆ ಕಲಾಪದಲ್ಲೂ ಚರ್ಚೆಯಾಗಿ, ಅನೇಕ ಶಾಸಕರು ಕೃತ್ಯವನ್ನು ಖಂಡಿಸಿದ್ದಾರೆ. ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.

‘ರಾಲಾಬ್ ಹಳ್ಳಿಯ ಗ್ರಾಮಸ್ಥರು ಕಂಜೈನಾಲ್ ಯಾತ್ರಾ ಪ್ರಯುಕ್ತ ಗ್ರಾಮದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ನಾಟಕ ಆಯೋಜಿಸಿದ್ದರು. ಈ ವೇಳೆ ಭೀಮಾಂಧರ್ ಗೌಡಾ ಹಾಗೂ ಆತನ ಕೆಲ ಸಹಚರರು ಸಭಿಕರ ಮನ ಸೆಳೆಯುವ ಉದ್ದೇಶದಿಂದ ಕತ್ತಿಯಿಂದ ಹಂದಿಯನ್ನು ಕೊಂದು ಕ್ರೌರ್ಯ ಮೆರೆದಿದ್ದಾರೆ. ಅಲ್ಲದೇ ಅದೇ ವೇದಿಕೆಯಲ್ಲಿ ಜೀವಂತ ಹಾವುಗಳನ್ನು ಪ್ರದರ್ಶಿಸಿ ಅನೇಕರಿಗೆ ಭಯ ಹುಟ್ಟಿಸಿದ್ದರು‘ ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಜೀವಂತ ಹಾವುಗಳನ್ನು ಪ್ರದರ್ಶನ ಮಾಡಿದ್ದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಂಘಟಕರ ಹಾಗೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.