ಅಮರಾವತಿ: ಅನೇಕರಿಗೆ ಕಾರು, ವಿಶೇಷ ನಂಬರ್ ಪ್ಲೇಟ್ಗಳನ್ನು ಕೊಳ್ಳುವ ಖಯಾಲಿ ಇರುತ್ತದೆ. ದುಬಾರಿ ಬೆಲೆಯಾದರೂ ತೊಂದರೆಯಿಲ್ಲ ಎನ್ನುವವರಿರುತ್ತಾರೆ. ಅಂತಹವರ ಸಾಲಿಗೆ ಆಂಧ್ರಪ್ರದೇಶ ಮೂಲದ ಕಿರಣ್ ಕೊಲಕುಲ ಎಂಬ ಉದ್ಯಮಿ ಸೇರುತ್ತಾರೆ.

ಕಿರಣ್ ತಮ್ಮ ಕಾರಿಗೆ ₹2.08 ಕೋಟಿ ಬೆಲೆಯ ಹೊಸ ನಂಬರ್ ಖರೀದಿ ಮಾಡಿದ್ದಾರೆ. ‘ಡಿಡಿಸಿ 001’ ಸಂಖ್ಯೆಯ ಈ ನಂಬರ್ ಪ್ಲೇಟ್ ದೇಶದಲ್ಲಿ ದುಬಾರಿ ನಂಬರ್ ಪ್ಲೇಟ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಿರಣ್ ತಮ್ಮ ಹೊಸ ಮಾರುತಿ ಇಗ್ನಿಸ್ ಕಾರಿಗೆ ಈ ದುಬಾರಿ ನಂಬರ್ ಪ್ಲೇಟ್ ಅಳವಡಿಸಿದ್ದಾರೆ. ಈ ಕಾರಿನ ಬೆಲೆಯೇ ₹5 ರಿಂದ ₹7 ಲಕ್ಷ (ಎಕ್ಸ್ ಶೋರೂಂ) ಇದೆ. ಆದರೆ ನಂಬರ್ ಪ್ಲೇಟ್ ಬೆಲೆ ಮಾತ್ರ ₹2 ಕೋಟಿಯಾಗಿದೆ. ಸದ್ಯ ಈ ಕಾರಿನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಬಿಗ್ಬಾಯ್ಸ್ ಟಾಯ್ ಕಂಪನಿ ಮಾಲೀಕ ಜತಿನ್ ಅಹುಜಾ ಅವರು ತಮ್ಮ ಬಳಿ ಇದ್ದ ‘ಡಿಡಿಸಿ 001’ ಸಂಖ್ಯೆಯ ನಂಬರ್ ಪ್ಲೇಟ್ ಅನ್ನು ಹರಾಜಿಗಿಟ್ಟಿದ್ದರು. ಇದನ್ನು ಕಿರಣ್ ₹2.08 ಕೋಟಿ ನೀಡಿ ಖರೀದಿಸಿದ್ದಾರೆ.

‘ಎಚ್ಆರ್38ಬಿ 8888' ಸಂಖ್ಯೆಯ ನಂಬರ್ ಪ್ಲೇಟ್ ಈವರೆಗೆ ದುಬಾರಿ ನಂಬರ್ ಪ್ಲೇಟ್ ಎಂಬ ಖ್ಯಾತಿ ಗಳಿಸಿತ್ತು. ಈ ನಂಬರ್ ಪ್ಲೇಟ್ ಕಳೆದ ನವೆಂಬರ್ನಲ್ಲಿ ನಡೆದ ಅಧಿಕೃತ ಹರಾಜಿನಲ್ಲಿ ₹1.17 ಕೋಟಿಗೆ ಮಾರಾಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.