ಭಾನುವಾರ, ಅಕ್ಟೋಬರ್ 2, 2022
21 °C

ವೇದಿಕೆಯಲ್ಲಿ ಕಳೆದುಹೋದವರಂತೆ ವರ್ತಿಸಿದ ಜೋ ಬೈಡನ್: ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ವಯಸ್ಸಿನ ಕಾರಣಕ್ಕೆ ವಿರೋಧಿಗಳಿಂದ ಆಗಾಗ ಟೀಕೆಗೆ ಒಳಗಾಗುತ್ತಾರೆ. ಚುನಾವಣಾ ಸಂದರ್ಭದಲ್ಲೂ ಕೂಡ ಅವರ ವಯಸ್ಸಿನ ಬಗ್ಗೆ ಚರ್ಚೆಯಾಗಿತ್ತು.

79 ವರ್ಷ ವಯಸ್ಸಿನ ಬೈಡನ್ ಅಮೆರಿಕ ಅಧ್ಯಕ್ಷರಾಗಿರುವುದರಿಂದ ಬಿಡುವಿಲ್ಲದೇ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರಬೇಕಾಗುತ್ತದೆ. ಈ ಸಂದರ್ಭದಲ್ಲಿ ಬೈಡನ್ ಅವರು ವಯೋಸಹಜ ಕಾರಣಕ್ಕಾಗಿ ಕಸಿವಿಸಿ ಅನುಭವಿಸುವಂತಾಗಿದೆ.

ನ್ಯೂಯಾರ್ಕ್‌ನಲ್ಲಿ ಬುಧವಾರ ನಡೆದ ಏಳನೇ ಗ್ಲೋಬಲ್ ಫಂಡ್ ರೈಸ್ ಸಮಾವೇಶದಲ್ಲಿ ಇಂತಹದೇ ಮುಜುಗರವನ್ನು ಬೈಡನ್ ಅನುಭವಿಸುವಂತಾಗಿದೆ. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಂತರ ಅವರು ವೇದಿಕೆ ಇಳಿದು ಬಲಭಾಗದಿಂದ ಹೊರನಡೆಯಲು ಮುಂದಾದರು.

ಆದರೆ, ಬೈಡನ್ ಅವರು ಇದ್ದಕ್ಕಿಂದಂತೆ ಕೆಲಕಾಲ ಗೊಂದಲಕ್ಕೆ ಈಡಾದರು. ನಿಂತಲ್ಲೇ ನಿಂತು ಎತ್ತ ಹೋಗಬೇಕು ಎಂದು ಗೊಂದಲಕ್ಕೆ ಒಳಗಾದರು. ತಿರುಗು–ಮರುಗಾಗಿ ನೋಡುತ್ತಾ ಎಲ್ಲಿಯೋ ಕಳೆದು ಹೋದವರಂತೆ ವರ್ತಿಸಿದರು. ಬಳಿಕ ನಿರೂಪಕರತ್ತ ತಿರುಗಿ ಏನೋ ಗೊಣಗುತ್ತಾ ವೇದಿಕೆ ಇಳಿದು ಹೋದರು. ಕಾರ್ಯಕ್ರಮದಲ್ಲಿ ಚಪ್ಪಾಳೆ ಸದ್ದು ಹೆಚ್ಚು ಇದ್ದಿದ್ದರಿಂದ ಅವರು ಏನು ಗೊಣಗಿದರು? ಎಂಬುದು ಸಂಘಟಕರಿಗೆ ಕೇಳಲಿಲ್ಲ.

ಇದಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮೆರಿಕದಲ್ಲಿನ ಅವರ ರಾಜಕೀಯ ವಿರೋಧಿಗಳು ಟೀಕೆಗಾಗಿ ಈ ವಿಡಿಯೊ ಬಳಸಿಕೊಳ್ಳುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು