ಸೋಮವಾರ, ಏಪ್ರಿಲ್ 6, 2020
19 °C
ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಸ್ಫೂರ್ತಿ

ಕೊರೊನಾ ಜಾಗೃತಿ: ರಾಜಸ್ಥಾನ ವೈದ್ಯರ ‘ಛೋಡೋ ಕಲ್ಕೀ ಬಾತೇ’ ಹಾಡಿನ ವಿಡಿಯೊ ವೈರಲ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Viral

ಜೈಪುರ: ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ವಿರುದ್ಧ ಜತೆಯಾಗಿ ಹೋರಾಡಲು ಕರೆ ನೀಡಿ ರಾಜಸ್ಥಾನದ ವೈದ್ಯರ ತಂಡವೊಂದು ಜತೆಯಾಗಿ ಹಾಡಿದ ವಿಡಿಯೊವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕೊರೊನಾ ಪೀಡಿತರ ಚಿಕಿತ್ಸೆಯಲ್ಲಿ ನಿರತರಾಗಿರುವ ರಾಜಸ್ಥಾನದ ಬಿಲ್ವಾರಾ ಸರ್ಕಾರಿ ಆಸ್ಪತ್ರೆಯ ವೈದ್ಯರು, ದಾದಿಯರ ತಂಡವೊಂದು ‘ಹಮ್ ಹಿಂದುಸ್ತಾನಿ’ ಸಿನಿಮಾದ ‘ಛೋಡೋ ಕಲ್ಕೀ ಬಾತೇ’ ಹಾಡನ್ನು ಜತೆಯಾಗಿ ಹಾಡಿದ್ದಾರೆ.

‘ಛೋಡೋ ಕಲ್ಕೀ ಬಾತೇ, ಕಲ್ಕೀ ಬಾತ್ ಪುರಾನೀ,
ನಯೇ ದೇರ್‌ ಮೇ ಲಿಖೇಂಗೇ, ಮಿಲ್ಕರ್ ನಯೀ ಕಹಾನಿ... (ನಿನ್ನೆಯ ಮಾತು ಬಿಟ್ಟುಬಿಡಿ, ಅದು ಹಳೆಯದು. ಮುಂದಿನ ದಿನಗಳಲ್ಲಿ ಜತೆಯಾಗಿ ಹೊಸ ಕಥೆ ಬರೆಯೋಣ)...’ ಎಂದು ವೈದ್ಯರ ತಂಡ ಹಾಡಿರುವ ವಿಡಿಯೊವನ್ನು ರಾಜಸ್ಥಾನದ ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

‘ಬಿಲ್ವಾರಾ ಸರ್ಕಾರಿ ಆಸ್ಪತ್ರೆಯಲ್ಲಿ, ಕೋವಿಡ್‌ನ ಕೇಂದ್ರದಲ್ಲಿ ವೈದ್ಯರಾದ ಮುಷ್ತಾಖ್, ಪ್ರಜಾಪತ್, ಅರೆವೈದ್ಯಕೀಯ ಸಿಬ್ಬಂದಿಯಾದ ಮುಕೇಶ್, ಸೈನ್, ಜ್ಞಾನ್, ಊರ್ವಶಿ, ಸರ್ಫರಾಜ್ ಮತ್ತು ಜಲಾಮ್ ದಿನದ 24 ಗಂಟೆಯೂ ಕೊರೊನಾ ವೈರಸ್ ನಿರ್ಮೂಲನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೀವೇ ನಿಜವಾದ ಹೀರೊಗಳು. ಇದು ನವಭಾರತದ ಉತ್ಸಾಹ’ ಎಂದು ರೋಹಿತ್ ಕುಮಾರ್ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಟ್ವೀಟ್‌ ಈಗ ವೈರಲ್ ಆಗಿದ್ದು, ಸಾವಿರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ಜತೆಗೆ, ವೈದ್ಯರ ಉತ್ಸಾಹಕ್ಕೆ ಮತ್ತು ಸ್ಫೂರ್ತಿ ತುಂಬುವ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು