ಬೆಂಗಳೂರು: ಮಲತಾಯಿಯೊಬ್ಬರು ಮಗಳಿಗೆ ಮನಸೋಇಚ್ಛೆ ಥಳಿಸಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಯುವತಿಗೆ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ತಂದೆ–ತಾಯಿಯಿಂದ ಬೇರ್ಪಟ್ಟಿರುವ ಯುವತಿ ತನ್ನ ತಂದೆ ಕಡೆಯ ಸಂಬಂಧಿ ಚಿಕ್ಕಮ್ಮಳ ಜೊತೆ ವಾಸ ಮಾಡುತ್ತಿದ್ದರು. ಈ ವೇಳೆ ಕೌಟುಂಬಿಕ ಕಲಹದ ಕಾರಣಕ್ಕೆ ಯುವತಿಗೆ ಆಕೆಯ ಚಿಕ್ಕಮ್ಮ ಕೆಳಕ್ಕೆ ಬೀಳಿಸಿ ಅಮಾನುಷವಾಗಿ ಥಳಿಸಿದ್ದಾರೆ.
ಯುವತಿಯ ಮೇಲೆ ಹಲ್ಲೆ ನಡೆಸುವಾಗ ‘ವಿಡಿಯೊ ಮಾಡು, ನನಗೇನು ಸಮಸ್ಯೆ ಇಲ್ಲ‘ ಎಂದು ಹೇಳಿದ್ದಾರೆ.
ಹಲ್ಲೆ ನಡೆಸಿರುವ ಮಹಿಳೆಯನ್ನು ಪೂಜಾ ಎಂದು ಗುರುತಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರತ್ಲಾಮ್ ಜಿಲ್ಲೆಯ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.