ಗುರುವಾರ , ನವೆಂಬರ್ 14, 2019
19 °C

ಕಟ್ಟಡದ ಎರಡನೇ ಮಹಡಿಯಿಂದ ಜಾರಿ ರಿಕ್ಷಾದೊಳಗೆ ಬಿದ್ದ ಮಗು; ಪ್ರಾಣಾಪಾಯದಿಂದ ಪಾರು

Published:
Updated:
viral video

ನವದೆಹಲಿ:  ರಸ್ತೆಯಲ್ಲಿ ಸಾಗುತ್ತಿರುವ ರಿಕ್ಷಾದೊಳಗೆ ಮಗುವೊಂದು ಮೇಲಿನಿಂದ ಬೀಳುತ್ತಿರುವ ಸಿಸಿಟಿವಿ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಎಎನ್‌ಐ ಸುದ್ದಿ ಸಂಸ್ಥೆ ಈ ವಿಡಿಯೊ ಟ್ವೀಟಿಸಿದ್ದು, ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಕಟ್ಟಡದ ಎರಡನೇ ಮಹಡಿಯಲ್ಲಿ ಆಟವಾಡುತ್ತಿದ್ದಾಗ ಜಾರಿದ ಮಗು ಬಿದ್ದಿದ್ದು ರಿಕ್ಷಾದೊಳಗೆ. ರಸ್ತೆಯಲ್ಲಿ ಸಾಗುತ್ತಿದ್ದ ರಿಕ್ಷಾವಾಲ ಏನಾಯಿತೆಂದು ತಿರುಗಿ ನೋಡುವ ಹೊತ್ತಲ್ಲಿ ಮಗು ರಿಕ್ಷಾದೊಳಗಿತ್ತು. ತಕ್ಷಣವೇ ಕೆಲವು ಜನರು ಮಗುವನ್ನು ಎತ್ತಿಕೊಂಡು ಓಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದು, ಮಗು ಆರಾಮವಾಗಿದೆ ಎಂದು ಮಗುವಿನ ಅಪ್ಪ ಆಶಿಶ್ ಜೈನ್ ಹೇಳಿದ್ದಾರೆ.

ಈ ವಿಡಿಯೊಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೀಗೆ:

ಪ್ರತಿಕ್ರಿಯಿಸಿ (+)