ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತನ್ನನ್ನೇ ತಾನು ಮದುವೆಯಾಗಿದ್ದ ಯುವತಿ!

ಗುಜರಾತ್‌ನ ಕ್ಷಮಾ ಬಿಂದು ಎನ್ನುವರು ಕಳೆದ ವರ್ಷ ತನ್ನನ್ನೇ ತಾನು ವಿವಾಹವಾಗಿ ಸುದ್ದಿಯಾಗಿದ್ದರು
Published 10 ಜೂನ್ 2023, 13:01 IST
Last Updated 10 ಜೂನ್ 2023, 13:01 IST
ಅಕ್ಷರ ಗಾತ್ರ

ಅಹಮದಾಬಾದ್‌: ಸ್ವಯಂ ವಿವಾಹ ಅಥವಾ ತನ್ನನ್ನೇ ತಾನು ಮದುವೆಯಾಗಿ (sologamy) ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಗುಜರಾತ್‌ನ ವಡೋದರಾದ ಮಹಿಳೆ ಕ್ಷಮಾ ಬಿಂದು (24) ಇದೀಗ ಮೊದಲನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಈ ಪ್ರಯುಕ್ತ ಅವರು ಇನ್‌ಸ್ಟಾಗ್ರಾಂನಲ್ಲಿ ಒಂದು ವರ್ಷದ ಪಯಣದ ಶಾರ್ಟ್ ವಿಡಿಯೊ ಒಂದನ್ನು ಹಂಚಿಕೊಂಡು Happy wedding anniversary ಎಂದು ತಮಗೆ ತಾವೇ ಶುಭಾಶಯ ಹೇಳಿಕೊಂಡಿದ್ದಾರೆ.

ಮೊದಲನೇ ವಾರ್ಷಿಕೋತ್ಸವದ ಪ್ರಯುಕ್ತ ಅವರು ಏಕಾಂಗಿಯಾಗಿ ಪ್ರವಾಸ ಮಾಡಿ ಅದರ ವಿಡಿಯೊ–ಫೋಟೊಗಳನ್ನು ಹಂಚಿಕೊಂಡಿದ್ದಾರೆ.

2022 ಜೂನ್ 9ರಂದು ಗುಜರಾತ್‌ನ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ, ವಡೋದರಾದ ಕಲ್ಯಾಣ ಮಂಟಪದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಸ್ವ–ವಿವಾಹವಾಗಿದ್ದರು. ಮಧುಚಂದ್ರಕ್ಕೆ ಗೋವಾಕ್ಕೆ ಹೋಗಿದ್ದರು.

ಸ್ಥಳೀಯ ರಾಜಕಾರಣಿಗಳು ಮತ್ತು ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಈ ವಿವಾಹ ಹೆಚ್ಚು ಸದ್ದು ಮಾಡಿತ್ತು.

ಕ್ಷಮಾ ಬಿಂದು ಅವರು ತನ್ನನ್ನೇ ತಾನು ಮದುವೆಯಾಗಿರುವ ಭಾರತದ ಪ್ರಥಮ ಮಹಿಳೆ ಎನಿಸಿಕೊಂಡಿದ್ದಾರೆ. ಕ್ಷಮಾ ತಮ್ಮನ್ನು ಡಿಜಿಟಲ್ ಕ್ರಿಯೇಟರ್ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT