ಸ್ಪೇನ್ನ ಬಾರ್ಸಿಲೋನಾದಲ್ಲಿ ಪ್ರತಿ ವರ್ಷ ಮೊಬೈಲ್ ವರ್ಲ್್ಡ್ ಕಾಂಗ್ರೆಸ್ (ಎಂಡಬ್ಲ್ಯುಸಿ) ನಡೆಯುತ್ತದೆ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಮೊಬೈಲ್ ಫೋನ್ಗಳ ಪ್ರದರ್ಶನ ಮೇಳ. ಹ್ಯಾಂಡ್ಸೆಟ್ ತಯಾರಿಕಾ ಕಂಪೆನಿಗಳು, ಅಪ್ಲಿಕೇಷನ್ ಅಭಿವೃದ್ಧಿಪಡಿಸುವವರು, ಸೇವಾ ಪೂರೈಕೆ ಕಂಪೆನಿಗಳು ಸೇರಿದಂತೆ ಮೊಬೈಲ್, ಸ್ಮಾರ್ಟ್ಫೋನ್ ಮತ್ತು ಫ್ಯಾಬ್ಲೆಟ್ ಮಾರುಕಟ್ಟೆಗೆ ಸಂಬಂಧಿಸಿದ ತಜ್ಞರೆಲ್ಲರೂ ಇಲ್ಲಿ ಸೇರುತ್ತಾರೆ. ಒಂದು ರೀತಿಯಲ್ಲಿ ಮೊಬೈಲ್ ಹ್ಯಾಂಡ್ಸೆಟ್ ಮಾರುಕಟ್ಟೆಗೆ ಸಂಬಂಧಿಸಿದ ಜಾಗತಿಕ ಸಂಗಮ ಇದು. ಮಾರುಕಟ್ಟೆ ತಜ್ಞರು ಇದನ್ನು ಭವಿಷ್ಯದ ದಿಕ್ಸೂಚಿ ಎಂದೇ ಬಣ್ಣಿಸುತ್ತಾರೆ.

ಈ ಬಾರಿ ಫೆ. 24ರಿಂದ 27ರವರೆಗೆ ‘ಎಂಡಬ್ಲ್ಯುಸಿ’ ನಡೆಯಿತು. ಹೊಸ ತಲೆಮಾರಿನ ಮೊಬೈಲ್ ಹೇಗಿರಬೇಕು ಎನ್ನುವುದಕ್ಕೆ ಈ ಶೃಂಗಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಕುತೂಹಲಕರವಾದದ್ದು. ಹ್ಯಾಂಡ್ಸೆಟ್ ಯಾವುದೇ ಇರಲಿ, ದೃಶ್ಯಪರದೆ ಮಾತ್ರ 5 ಇಂಚಿಗಿಂತ ದೊಡ್ಡದಿರಬೇಕು. ಕನಿಷ್ಠ 2 ಜಿ.ಬಿ ರ್್ಯಾಮ್ ಇರಬೇಕು. ಕೈಯಲ್ಲಿ ಹಿಡಿದುಕೊಳ್ಳಲು ಕಷ್ಟವಾಗಿರಬೇಕು ಶರ್ಟಿನ ಜೇಬಿನಲ್ಲಿ ಹಿಡಿಸುವುದಕ್ಕಿಂತಲೂ ತುಸು ದೊಡ್ಡದಿರಬೇಕು. ಆದರೆ, ಜೀನ್ಸ್ ಪ್ಯಾಂಟಿನ ಹಿಂಬದಿ ಜೇಬಿನಲ್ಲಿ (trouser pocket) ಇಳಿಬಿಡುವಂತಿರಬೇಕು. ಜೇಬಿನಲ್ಲಿರುವಾಗ ಅದರ ಮೇಲ್ತುದಿ ತುಸುವೇ ಹೊರಗೆ ಇಣುಕುತ್ತಿರಬೇಕು.

ಹೌದು. ಸ್ಮಾರ್ಟ್ಫೋನ್ಗಿಂತ ತುಸುವೇ ದೊಡ್ಡದಿರುವ, ಆದರೆ, ಟ್ಯಾಬ್ಲೆಟ್ಗಿಂತ ಸ್ವಲ್ಪ ಚಿಕ್ಕದಿರುವ ಈ ಉಪಕರಣಕ್ಕೆ ‘ಫ್ಯಾಬ್ಲೆಟ್’ ಎನ್ನುತ್ತಾರೆ.
ಪ್ಯಾಂಟಿನ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಇದಕ್ಕೆ ‘ಟ್ರೌಸರ್ಸ್ ಫೋನ್’ ಎಂಬ ಅಡ್ಡ ಹೆಸರೂ ಇದೆ. ಇದು ಹೊಸ ತಲೆಮಾರಿನವರ ಅಚ್ಚುಮೆಚ್ಚಿನ ಆಯ್ಕೆ!
ಹೆಚ್ಚೂ ಕಡಿಮೆ ಫ್ಯಾಬ್ಲೆಟ್ ಗುಣಲಕ್ಷಣಗಳನ್ನು ಹೋಲುವ 10 ಹ್ಯಾಂಡ್ಸೆಟ್ಗಳನ್ನು ಈ ಬಾರಿ ‘ಎಂಡಬ್ಲ್ಯುಸಿ’ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. ಅವುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ನೋಕಿಯಾ ಎಕ್ಸ್ಎಲ್
ನೋಕಿಯಾ ಬ್ರಾಂಡ್ ಇಷ್ಟಪಡುವ ಅನೇಕರಿಗೆ, ಸ್ಮಾರ್ಟ್ಫೋನ್ ಖರೀದಿವಿಚಾರಕ್ಕೆ ಬಂದಾಗ ಅದರಲ್ಲಿ ಆಂಡ್ರಾಯ್ಡ್ ಕಾರ್ಯನಿರ್ವಹಣಾ ತಂತ್ರಾಂಶ ಇಲ್ಲವಲ್ಲ ಎನ್ನುವ ದೊಡ್ಡ ಕೊರತೆ ಕಾಡುತ್ತಿತ್ತು. ಆಂಡ್ರಾಯ್ಡ್ ಮೇಲಿನ ಮೋಹದಿಂದಾಗಿ ಅಥವಾ ವಿಂಡೋಸ್ ಮೇಲಿನ ದ್ವೇಷದಿಂದಾಗಿ ಅನೇಕರು ನೋಕಿಯಾ ಸ್ಮಾರ್ಟ್ಫೋನ್ಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದರು.

ಹೇಳಿ ಕೇಳಿ ನೋಕಿಯಾ ಒಡೆತನ ಹೊಂದಿರುವ ಮೈಕ್ರೊಸಾಫ್ಟ್ ಗೂಗಲ್ನ ನೇರ ಪ್ರತಿಸ್ಪರ್ಧಿ ಕಂಪೆನಿ. ಹೀಗಾಗಿ ಈ ದಶಕದಲ್ಲಿ ನೋಕಿಯಾದಿಂದ ಆಂಡ್ರಾಯ್ಡ್ ಫೋನ್ ಬರುವುದಿಲ್ಲ ಎಂದೇ ಗ್ರಾಹಕರು ನಂಬಿದ್ದರು. ಆದರೆ, ಎಲ್ಲರನ್ನೂ ಅಚ್ಚರಿಗೆ ಕೆಡವಿ, ‘ಎಂಡಬ್ಲ್ಯುಸಿ’ನಲ್ಲಿ ನೋಕಿಯಾ ಮೊದಲ ಆಂಡ್ರಾಯ್ಡ್ ಫೋನ್ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಅಷ್ಟೇ ಏಕೆ, ಬ್ಲ್ಯಾಕ್ಬೆರಿ ಮೆಸೆಂಜರ್ ಸೇವೆಯನ್ನೂ ಈ ಸ್ಮಾರ್ಟ್ಫೋನ್ನಲ್ಲಿ ಒದಗಿಸಿದೆ.

ನೋಕಿಯಾ ‘ಎಕ್ಸ್’, ಎಕ್ಸ್ ಪ್ಲಸ್, ಮತ್ತು ‘ಎಕ್ಸ್ಎಲ್’ ಹೆಸರಿನ ಈ ಮೂರು ಸ್ಮಾರ್ಟ್ಫೋನ್ಗಳು ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್ನ (ಎಒಎಸ್ಪಿ) ಪರಿಷ್ಕೃತ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿವೆ. ಆದರೆ, ಬಳಕೆದಾರರು ಇದರಲ್ಲಿ ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಜಿ–ಮೇಲ್ ಮತ್ತು ಗೂಗಲ್ ಪ್ಲಸ್ ಸೇವೆಯನ್ನೂ ನೇರವಾಗಿ ಪಡೆಯಲು ಸಾಧ್ಯವಿಲ್ಲ. ಪ್ಲೇ ಸ್ಟೋರ್ನಿಂದ ಅಪ್ಲಿಕೇಷನ್ಗಳನ್ನು ಡೌನ್ಲೋಡ್ ಮಾಡಿಕೊಂಡು ಬಳಸುವ ಬದಲಿಗೆ ಪ್ರತ್ಯೇಕವಾಗಿ ಅನುಸ್ಥಾಪಿಸಿಕೊಳ್ಳಬೇಕು. ಆದರೆ, ಮೈಕ್ರೊಸಾಫ್ಟ್ನ ಸ್ಕೈಡ್ರೈವ್ ಸೇವೆ ಪಡೆಯಲು ಯಾವುದೇ ಅಡ್ಡಿಯಿಲ್ಲ. 5 ಇಂಚಿನ ದೃಶ್ಯ ಪರದೆ ಹೊಂದಿರುವ ಈ ಫೋನ್ಗಳ ಬೆಲೆ 89 ಯೂರೊಗಳಿಂದ (₨7,600) ಆರಂಭವಾಗುತ್ತದೆ!

ಸೋನಿ ಎಕ್ಸ್ಪೀರಿಯಾ ಜೆಡ್–2
8.2 ಎಂ.ಎಂ.ಗಳಷ್ಟು ತೆಳ್ಳಗಿರುವ ಈ ಸ್ಮಾರ್ಟ್ಫೋನ್, ಸೋನಿಯ ಅತ್ಯಾಕರ್ಷಕ ವಿನ್ಯಾಸಕ್ಕೆ ಮತ್ತೊಂದು ನಿದರ್ಶನ. ಜನಪ್ರಿಯ ಜೆಡ್–1 ಸರಣಿಗಿಂತಲೂ ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳು ಇದರಲ್ಲಿವೆ. 5.2 ಇಂಚಿನ ದೃಶ್ಯಪರದೆ ಸಂಪೂರ್ಣ ಎಚ್.ಡಿ ತಂತ್ರಜ್ಞಾನ, 20.7 ಮೆಗಾಪಿಕ್ಸೆಲ್ ಕ್ಯಾಮೆರಾ, ಹೊಸ ಸ್ನ್ಯಾಪ್ಡ್ರ್ಯಾಗನ್ 800 ಪ್ರೊಸೆಸರ್, 3ಜಿಬಿ ರ್್ಯಾಮ್ ಜಡ್–2ನ ತಾಂತ್ರಿಕ ವೈಶಿಷ್ಟ್ಯಗಳು. ವಿಡಿಯೊ ನೋಡಿದರೆ ಎಲ್ಇಡಿ ಟಿವಿಯ ಅನುಭವ ನೀಡುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಬ್ಯಾಟರಿ ಒಂದು ವಾರದವರೆಗೆ ಬಾಳಿಕೆ ಬರುತ್ತದೆ ಎನ್ನುವುದು ಕಂಪೆನಿ ನೀಡುವ ವಾಗ್ದಾನ.

ಯೊಟಾಫೋನ್–2
ಇದು ಮುಂದಿನ ತಲೆಮಾರಿನ ಕಾಲ್ಪನಿಕ ಫೋನ್. ಇನ್ನಷ್ಟೇ ಮಾರುಕಟ್ಟೆಗೆ ಬಿಡುಗಡೆ ಆಗಬೇಕಿದೆ. ಹಿಂಬದಿಯಲ್ಲೂ ‘ಇ–ಪೇಪರ್ ಸ್ಕ್ರೀನ್’ ಸೌಲಭ್ಯ ಇರುತ್ತದೆ. ಮುಂಭಾಗದಲ್ಲಿ 5 ಇಂಚಿನ ದೃಶ್ಯಪರದೆ ಇರುತ್ತದೆ.

ಹುವಾವೆ ಅಸೆಂಡ್ ಜಿ–6
5 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯ. ಸಾಮಾನ್ಯವಾಗಿ ಸ್ಮಾರ್ಟ್ಫೋನ್ಗಳ ಮುಂಭಾಗದ ಕ್ಯಾಮೆರಾ ಸಾಮರ್ಥ್ಯ ಕಡಿಮೆ ಇರುತ್ತದೆ. ಆದರೆ, ಅಸೆಂಡ್ ಜಿ–6ನಲ್ಲಿ ಬಳಕೆದಾರ ತನ್ನ ಚಿತ್ರವನ್ನು ತಾನೇ ಗರಿಷ್ಠ ಗುಣಮಟ್ಟದಲ್ಲಿ ಸೆರೆಹಿಡಿಯಬಹುದು. 4.5 ಇಂಚಿನ ಐಪಿಎಸ್ ದೃಶ್ಯಪರದೆ, 1 ಜಿಬಿ ರ್್ಯಾಮ್ ಸಾಮರ್ಥ್ಯ ಇದರಲ್ಲಿದೆ. ಬೆಲೆಯೂ ಹೆಚ್ಚೇನಿಲ್ಲ, ₨12,500 ಮಾತ್ರ.

ಗ್ಯಾಲಕ್ಸಿ ಎಸ್–5
ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಆಂಡ್ರಾಯ್ಡ್ ಪೋನ್ಗಳ ಅತ್ಯಂತ ಜನಪ್ರಿಯ ಸರಣಿ ಗ್ಯಾಲಕ್ಸಿ. ಗ್ಯಾಲಕ್ಸಿ ಎಸ್–5ನಲ್ಲಿ, ಎಸ್–4ಗಿಂತಲೂ ಸುಧಾರಿತ ತಂತ್ರಜ್ಞಾನ ಇದೆ. 801 ಸ್ನ್ಯಾಪ್ಡ್ರ್ಯಾಗನ್ ಪ್ರೊಸೆಸರ್, 2ಜಿಬಿ ರ್್ಯಾಮ್, 16 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಇರುವ ಈ ಫೋನ್ ಜಲ ನಿರೋಧಕ ತಂತ್ರಜ್ಞಾನದಲ್ಲಿ ಹೊರಬಂದಿದೆ.

ಗ್ರಾಂಡ್ ಮೆಮೊ –2
6 ಇಂಚಿನ ದೃಶ್ಯಪರದೆ ಹೊಂದಿರುವ ಈ ಫ್ಯಾಬ್ಲೆಟ್ ಕೇವಲ 7.2 ಎಂ.ಎಂ ದಪ್ಪ ಇದೆ. ಸೌಲಭ್ಯದಲ್ಲಿ ಸೋನಿ ಎಕ್ಸ್ಪೀರಿಯಾ ಜೆಡ್–2 ಹೋಲುವ, ಜೆಡ್ಟಿಇ ಮೆಮೊ–2, ಸ್ನ್ಯಾಪ್ಡ್ರ್ಯಾಗನ್ 400 ಪ್ರೊಸೆಸರ್ ಹೊಂದಿದೆ. ಹಿಂಭಾಗದಲ್ಲಿ 13 ಮೆಗಾಫಿಕ್ಸಲ್ ಮತ್ತು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಹಲವು ವಿಶೇಷತೆಗಳೂ ಇದರಲ್ಲಿವೆ.

ಎಲ್ಜಿ ಜಿ–2 ಮಿನಿ
ಹೆಸರು ‘ಮಿನಿ’ ಆದರೂ ಈ ಸ್ಮಾರ್ಟ್ಪೋನ್ 4.7 ಇಂಚಿನ ದೃಶ್ಯಪರದೆ ಹೊಂದಿದೆ. ಆದರೆ, ‘ಜಿ 2–ಪ್ರೊ’ಗೆ ಹೋಲಿಸಿದರೆ ತುಸು ಚಿಕ್ಕದು. 1.2 ಗಿಗಾಹರ್ಟ್ಸ್ ಪ್ರೊಸೆಸರ್ ಸಾಮರ್ಥ್ಯ ಇದ್ದರೂ ಎಚ್ಡಿ ರೆಸಲ್ಯೂಷನ್ ಇಲ್ಲದಿರುವುದು ಇದರ ಕೊರತೆ. ಆದರೆ, ಸುಧೀರ್ಘ ಬ್ಯಾಟರಿ ಬಾಳಿಕೆ ಬರುತ್ತದೆ ಎನ್ನುವುದು ಸಕಾರಾತ್ಮಕ ಅಂಶ.

ಎಲ್ಜಿ ಜಿ ಪ್ರೊ–2
5.9 ಇಂಚಿನ ದೃಶ್ಯಪರದೆ ಹೊಂದಿರುವ ಇದನ್ನು ‘ಫ್ಯಾಬ್ಲೆಟ್’ ವರ್ಗಕ್ಕೆ ಸೇರಿಸಬಹುದು. ಬಳಕೆದಾರನ ಭಾವವನ್ನು ಅರಿತು ತನ್ನಿಂದ ತಾನೇ ಕಾರ್ಯನಿರ್ವಹಿಸುವ ತಂತ್ರಜ್ಞಾನ ಇದರಲ್ಲಿದೆ. 13 ಮೆಗಾಪಿಕ್ಸೆಲ್ ಸಾಮರ್ಥ್ಯದ ಅತ್ಯಾಧುನಿಕ ಕ್ಯಾಮೆರಾ, 2.26 ಗಿಗಾಹರ್ಟ್ಸ್ ಸ್ನ್ಯಾಪ್ಡ್ರ್ಯಾಗನ್ 800 ಪ್ರೊಸೆಸರ್, 3ಜಿಬಿ ರ್್ಯಾಮ್ ಮತ್ತು ಅತ್ಯಂತ ಸ್ಪಷ್ಟವಾಗಿ ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳುವ (slow-motion recording option) ತಂತ್ರಜ್ಞಾನ ಇದರ ವಿಶೇಷತೆಗಳು.

ಎಕ್ಸ್ಪೀರಿಯಾ ಎಂ–2
4.8 ಇಂಚಿನ ಎಚ್.ಡಿ ದೃಶ್ಯಪರದೆ ಹೊಂದಿರುವ ಈ ಸ್ಮಾರ್ಟ್ಪೋನ್ 4ಜಿ ಬೆಂಬಲಿಸುತ್ತದೆ. ಆದರೆ, ಸೋನಿಯ ಇತರೆ ಸ್ಮಾರ್ಟ್ಫೋನ್ ವಿನ್ಯಾಸಕ್ಕೆ ಹೋಲಿಸಿದರೆ ಇದರ ಆಕರ್ಷಣೆ ಕಡಿಮೆ. 1ಜಿ.ಬಿ ರ್್ಯಾಮ್, 8 ಮೆಗಾಫಿಕ್ಸಲ್ ಕ್ಯಾಮೆರಾ ಪ್ರಮುಖ ತಾಂತ್ರಿಕ ವಿಶೇಷತೆಗಳು. ಬೆಲೆ ₨11 ಸಾವಿರ.
ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಹಲವು ದೇಶಗಳಲ್ಲಿ ಆಂಡ್ರಾಯ್ಡ್ ಫೋನ್ಗಳು ಇತ್ತೀಚೆಗೆ ಸೃಷ್ಟಿಸುತ್ತಿರುವ ಸಂಚಲನ ಅಷ್ಟಿಷ್ಟಲ್ಲ. ಮೊಬೈಲ್ ಹ್ಯಾಂಡ್ಸೆಟ್ ತಯಾರಿಕಾ ಕಂಪೆನಿಗಳು ಈ ಸತ್ಯವನ್ನು ಮನಗಂಡಿವೆ.

ನೋಕಿಯಾದಂತಹ ಕಂಪೆನಿಯೇ ಈಗ ತನ್ನ ಅಸ್ತಿತ್ವಕ್ಕಾಗಿ ಆಂಡ್ರಾಯ್ಡ್ ಜತೆ ಕೈಜೋಡಿಸಿದೆ. ಈ ಬಾರಿ ‘ಎಂಡಬ್ಲ್ಯುಸಿ’ನಲ್ಲಿ ಆ್ಯಪಲ್ ಕಂಪೆನಿ ಭಾಗವಹಿಸಿಲ್ಲ. ನೋಕಿಯಾ ಯಾವುದೇ ಹೊಸ ವಿಂಡೋಸ್ ಫೋನ್ ಪರಿಚಯಿಸಿಲ್ಲ. ವೇದಿಕೆಯನ್ನು ಚೆನ್ನಾಗಿ ಬಳಸಿ ಕೊಂಡಿದ್ದು ಆಂಡ್ರಾಯ್ಡ್ ಮಾತ್ರ ಎಂಬ ಮಾತುಗಳೂ ಈಗ ಕೇಳಿಬರುತ್ತಿವೆ.

4ಎಚ್ಟಿಸಿ ಡಿಸೈರ್ 816
‘ಎಚ್ಟಿಸಿ’ ಡಿಸೈರ್ ಸರಣಿಯಲ್ಲಿ ಹೊಸ ಫ್ಯಾಬ್ಲೆಟ್ ಪರಿಚಯಿಸಿದೆ. 1280x720 ರೆಸಲ್ಯೂಷನ್ ಸಾಮರ್ಥ್ಯದ, 5.5 ಇಂಚಿನ ದೃಶ್ಯಪರದೆ ಹೊಂದಿರುವ ಇದನ್ನು ಅಗ್ಗದ ದರದ ಸ್ಮಾರ್ಟ್ಫೋನ್ಗಳು ಹೆಚ್ಚು ಮಾರಾಟವಾಗುವ ದೇಶಗಳಿಗಾಗಿಯೇ ತಯಾರಿಸಲಾಗಿದೆ. ಕಡಿಮೆ ಹಣದಲ್ಲಿ ಎಲ್ಲ ಸೌಲಭ್ಯ ಇರುವ ದೊಡ್ಡ ಹ್ಯಾಂಡ್ಸೆಟ್ ಖರೀದಿಸಬೇಕು ಎಂದು ಕನಸು ಕಾಣುವವರಿಗೆ ಇದು ಅತ್ಯುತ್ತಮ ಆಯ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.