ಮಂಗಳವಾರ, ಮೇ 18, 2021
30 °C

Video | ಜಸ್ಟ್‌ ಮ್ಯೂಸಿಕ್‌–17: ಆಭರಣ ಮತ್ತು ಮೋರ್ಚಿಂಗ್‌!

ಅಪರೂಪದ ಮೋರ್ಚಿಂಗ್‌ ವಾದಕ ವಿದ್ವಾನ್‌ ಬಿ.ರಾಜಶೇಖರ್‌ ಅವರಿಗೆ ಒಂದು ಹಂತದಲ್ಲಿ ನಿರಂತರ ಸಂಗೀತ ಕಾರ್ಯಕ್ರಮಗಳು ಬೇಸರ ತರಿಸಿದ್ದವು. ವಾರ, ತಿಂಗಳುಗಟ್ಟಲೆ ಕುಟುಂಬ ಸದಸ್ಯರನ್ನು ಬಿಟ್ಟು ಸಂಗೀತ ಪ್ರವಾಸ ತೆರಳುವುದು ಕಷ್ಟವಾಗಿತ್ತು.  ಮೋರ್ಚಿಂಗ್‌ ವಾದನವನ್ನೇ ನಿಲ್ಲಿಸಿ ತಮ್ಮ ಕುಲಕಸುಬು ಆಭರಣ ತಯಾರಿಕೆಯಲ್ಲಿ ತೊಡಗುವ ನಿರ್ಧಾರವನ್ನು ಅವರು ಕೈಗೊಂಡಿದ್ದರು.

ಈ ನಿರ್ಧಾರವನ್ನು ವಿದ್ವಾನ್‌ ಕದ್ರಿ ಗೋಪಾಲನಾಥ್‌ ಅವರೊಂದಿಗೆ ಹಂಚಿಕೊಂಡರು. ಆದರೆ ಕದ್ರಿ ಗೋಪಾಲನಾಥರು ಹೇಳಿದ ಮಾತಿನಿಂದ ಅವರು ತಮ್ಮ ನಿರ್ಧಾರವನ್ನು ವಾಪಸ್‌ ಪಡೆದರು. ‘ಆಭರಣ ತಯಾರಿಸಲು ಬೇಕಾದಷ್ಟು ಜನ ಸಿಗುತ್ತಾರೆ, ಆದರೆ ಮೋರ್ಚಿಂಗ್‌ ನುಡಿಸಲು ಬೇರಾರೂ ಸಿಗುವುದಿಲ್ಲ, ನೀವೇ ನುಡಿಸಬೇಕು’ ಎಂದು ಕದ್ರಿ ಗೋಪಾಲನಾಥ್‌ ಹೇಳಿದ್ದರು. ನಂತರ ರಾಜಶೇಖರ್‌ ಅವರು, ಈ ಪುಟಾಣಿ ವಾದ್ಯದಲ್ಲಿ ಏನೋ ವಿಶೇಷ ಇದೆ ಎಂದುಕೊಳ್ಳುತ್ತಾ ವಾದ್ಯದ ಆಳಕ್ಕಿಳಿಯುತ್ತಾರೆ. ಸಾಧನೆಯತ್ತ ಹೆಜ್ಜೆ ಇಡುತ್ತಾರೆ. ವಾದ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಡುತ್ತಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp