ಮಂಗಳವಾರ, ಸೆಪ್ಟೆಂಬರ್ 28, 2021
21 °C

ಜಸ್ಟ್‌ ಮ್ಯೂಸಿಕ್‌ – 28: ಪ್ರೇಮಲೋಕ!

ಖ್ಯಾತ ಗಾಯಕ, ಬಹುವಾದ್ಯ ಪಾರಂಗತ ವಿದ್ವಾನ್‌ ಕೆ.ಟಿ.ಉದಯ್‌ ಕಿರಣ್‌ ಅವರ ಸಾಧನೆಗೆ ಅಂಧತ್ವ ಎಂದೂ ಅಡ್ಡಿಯಾಗಿಲ್ಲ. ಗಾಯನದ ಜೊತೆಗೆ ವೈಲಿನ್‌, ಕೀಬೋರ್ಡ್‌, ಮೃದಂಗ, ಹಾರ್ಮೋನಿಯಂ ನುಡಿಸುವ ಅವರು ದೇಶ–ವಿದೇಶದ ದಿಗ್ಗಜ ಕಲಾವಿದರ ಜೊತೆ ಕೆಲಸ ಮಾಡಿದ್ದಾರೆ. ಅವಧಾನ ತಾಳ, ಅವಧಾನ ಪಲ್ಲವಿ ಮೂಲಕ ಸಂಗೀತ ಲೋಕದಲ್ಲಿ ಹಲವು ಪ್ರಯೋಗ ಮಾಡಿದ್ದಾರೆ. ಸಂಗೀತ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್‌, ಚಿನ್ನದ ಪದಕ ಗಳಿಸಿರುವ ಅವರು ಸದ್ಯ ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯ, ತಿರುವಾರೂರು ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ಧಾರೆ. ಸಂಗೀತ ಜಗತ್ತಿನಲ್ಲಿ ವಿಹಾರ ಮಾಡುತ್ತಿದ್ದ ಉದಯ್‌ ಕಿರಣ್‌ ಅವರು ಈಗ ‘ಪ್ರೇಮಲೋಕ’ದ ದರ್ಶನ ಪಡೆದಿದ್ದಾರೆ. ತುಮಕೂರಿನ ವಿದುಷಿ ಕೆ.ವಿ.ಮಾಧುರಿ ಅವರು ಉದಯ್‌ ಕಿರಣ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆದರ್ಶ ಜೋಡಿ ಎನಿಸಿಕೊಂಡಿರುವ ಈ ದಂಪತಿ ಸಂಗೀತದಲ್ಲಿ ಮತ್ತಷ್ಟು ಎತ್ತರಕ್ಕೇರುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಮಾಧುರಿ ಅವರು ಪತಿ ಉದಯ್‌ ಕಿರಣ್‌ ಅವರಿಗೆ ಕಣ್ಣಾಗಿದ್ದಾರೆ. ಅವರ ಸಂಗೀತ– ಪ್ರೇಮಲೋಕದ ಭಾವನೆಗಳು ಈ ವಾರದ ಜಸ್ಟ್‌ ಮ್ಯೂಸಿಕ್‌ ಸರಣಿಯಲ್ಲಿವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...