ಮಂಗಳವಾರ, ಮಾರ್ಚ್ 28, 2023
23 °C

ಕಾಡೊಳಗಿನ ಕಲೆ ಅಮ್ಚೆ ಮದ್ಲೆ

ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ವೈಭವದಲ್ಲಿ ಸಿದ್ದಿ ಜನಾಂಗದ ಕೊಡುಗೆ ಅಪಾರ. ಜಿಲ್ಲೆಯ ಮುಂಡಗೋಡ, ಅಂಕೋಲಾ, ಯಲ್ಲಾಪುರ, ಹಳಿಯಾಳ, ಜೊಯಿಡಾಗಳಲ್ಲಿ ಸಾವಿರಾರು ಕುಟುಂಬಗಳು ನೆಲೆಯೂರಿವೆ. ಇವರು ತಲೆತಲಾಂತರದಿಂದ ಸಾಂಸ್ಕೃತಿಕ ಕಲೆಗಳ ಒಲವು ಬೆಳೆಸಿಕೊಂಡು ಬಂದಿದ್ದು, ತಾವು ನೆಲೆಯೂರಿರುವ ನೆಲ, ಪ್ರಕೃತಿಯನ್ನು ಅಪ್ಪಿಕೊಂಡಿದ್ದಾರೆ. ಜನಪದ ಸೊಗಡಿನ ಹಾಡು, ನೃತ್ಯಗಳೇ ಇವರನ್ನು ಒಂದುಗೂಡಿಸಿವೆ. ಅನೇಕರು ತಮ್ಮ ವಿಭಿನ್ನ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಜಗದಗಲಕ್ಕೆ ಪಸರಿಸುವ ಕನಸು ಹೊತ್ತಿದ್ದಾರೆ.