ಭಾನುವಾರ, ಏಪ್ರಿಲ್ 18, 2021
26 °C

VIDEO: ಗೋಕರ್ಣ: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆ

ಗೋಕರ್ಣ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ‘ದುರ್ಗಾ ಭೈರವಿ’ದೋಣಿ ಮುಳುಗಿದೆ. ಅದರಲ್ಲಿದ್ದ 14 ಮೀನುಗಾರರನ್ನು ರಕ್ಷಿಸಲಾಗಿದೆ.

ಅವಘಡದಲ್ಲಿ ಸುಮಾರು ₹ 25 ಲಕ್ಷ ಹಾನಿ ಸಂಭವಿಸಿದೆ. ದೋಣಿಯು ಕುಮಟಾ ತಾಲ್ಲೂಕಿನ ಮಿರ್ಜಾನ್‌ನ ವೆಂಕಟ್ರಮಣ ಹೊಸಬು ಅಂಬಿಗ ಎಂಬುವವರಿಗೆ ಸೇರಿದೆ. ಅವರು ಹಾಗೂ ಇತರ 13 ಮಂದಿ ತದಡಿ ಬಂದರಿನಿಂದ ಬುಧವಾರ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು. ಶುಕ್ರವಾರ ತಿರುಗಿ ಬರುತ್ತಿದ್ದಾಗ ದೋಣಿಯು ಮುಳುಗಲಾರಂಭಿಸಿತು. ಸಮೀಪದಲ್ಲಿದ್ದ ‘ಸರ್ವಲಕ್ಷ್ಮಿ’ ಎಂಬ ದೋಣಿಯಲ್ಲಿದ್ದವರಿಗೆ ವೈರ್‌ಲೆಸ್ ಮುಖಾಂತರ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ಬಂದ ಅವರು ಮುಳುಗುತ್ತಿದ್ದ ದೋಣಿಯಲ್ಲಿದ್ದ ಎಲ್ಲರನ್ನೂ ರಕ್ಷಿಸಿದರು. ಮುಳುಗಿದ ‘ದುರ್ಗಾಭೈರವಿ’ ದೋಣಿಯಲ್ಲಿ ಮಿರ್ಜಾನ್, ಶಿರಗುಂಜಿ, ಉಳುವರೆ, ಸಗಡಗೇರಿ ಹಾಗೂ ಗಂಗಾವಳಿಯ ಮೀನುಗಾರರಿದ್ದರು.