ಬುಧವಾರ, ಜೂನ್ 16, 2021
22 °C

ಸಿನಿ ಸಿಪ್ 25: ದರ್ಶನ್‌ ಪುನರ್ಜನ್ಮದ 'ಸಾರಥಿ'

'ಸಾರಥಿ' ಸಿನಿಮಾ ತೆರೆಕಂಡಾಗ ದರ್ಶನ್ ನ್ಯಾಯಾಂಗದ ವಶದಲ್ಲಿದ್ದರು. ಇನ್ನು ಅವರ ಕತೆ ಮುಗಿದೇಹೋಯಿತು ಎಂದು ಗಾಂಧಿನಗರ ಮಾತನಾಡಿಕೊಂಡಿತ್ತು. ಚಿತ್ರೀಕರಣ ಪೂರ್ಣವಾಗುವ ಮೊದಲೇ ನಿರ್ಮಾಪಕರೇ ಬದಲಾಗಿದ್ದ ಸಿನಿಮಾ ಅದು. ಆಮೇಲೆ ಅದು ಎಷ್ಟರ ಮಟ್ಟಿಗೆ ಹಿಟ್ ಆಯಿತು ಎಂದರೆ ನಟನಾಗಿ ದರ್ಶನ್‌ಗೆ ಪುನರ್ಜನ್ಮ ಸಿಕ್ಕಂತಾಯಿತು.