ಸಿಲಿಕಾನ್ ಸಿಟಿ ಆಗುವ ಮುನ್ನ ಬೆಂಗಳೂರನ್ನು ಅದರ ವಾತಾವರಣಕ್ಕಾಗಿಯೇ ಉದ್ಯಾನಗಳ ನಗರಿ, ಏರ್ ಕಂಡೀಷನ್ ಸಿಟಿ, ಲೇಕ್ ಸಿಟಿ, ಗ್ರೀನ್ ಸಿಟಿ ಎಂದೆಲ್ಲ ಕರೆಯಲಾಗುತ್ತಿತ್ತು. ಇದಕ್ಕೆ ನಗರದಲ್ಲಿದ್ದ ಕೆರೆಗಳು, ಹಸಿರು ಹೊದಿಕೆಯೇ ಪ್ರಮುಖ ಕಾರಣ. ಬಸವನಗುಡಿ, ಚಾಮರಾಜಪೇಟೆಗಳೂ ಸೇರಿದಂತೆ ನಗರದ ಹಲವು ಪ್ರದೇಶಗಳು ‘ಫ್ರೂಟ್ ಗಾರ್ಡನ್’ ಎಂಬ ಹೆಸರನ್ನೂ ಪಡೆದಿದ್ದವು. ಏಕೆಂದರೆ ಇಲ್ಲಿ ಪ್ರತಿಯೊಂದು ಮನೆಯ ಆವರಣದಲ್ಲೂ ಹತ್ತಕ್ಕೂ ಹೆಚ್ಚು ಗಿಡಗಳಿದ್ದವು. ಆದರೆ, ಇದೀಗ ಒಂದು ಅಡಿ ಬಿಡದೆ ಎಲ್ಲಕ್ಕೂ ಕಾಂಕ್ರೀಟ್ ಸುರಿಯಲಾಗಿದೆ. ಹೀಗಾಗಿಯೇ ಜೀವರಕ್ಷಕ ಆಕ್ಸಿಜನ್‌ಗೆ ಹಾಹಾಕಾರ ಉಂಟಾಗಿದೆ. ನೋಡಿ ಗ್ರೀನ್ ಟಾಕ್..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.