ಬೇಕಾಗುವ ಸಾಮಗ್ರಿಗಳು: ಅಕ್ಕಿ 1 ಕಪ್, ಬ್ಯಾಡಿಗೆ ಮೆಣಸಿನಕಾಯಿ 6, ಕೆಂಪು ಮೆಣಸಿನಕಾಯಿ 6, ಜೀರಿಗೆ 1 ಚಮಚ, ಬೆಳ್ಳುಳ್ಳಿ 20 ಎಸಳು, ಎಣ್ಣೆ 7-8 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹುಣಸೆಹಣ್ಣು ಒಂದು ನಿಂಬೆ ಹಣ್ಣಿನ ಗಾತ್ರ, ಹರಿಶಿನ ಕಾಲು ಚಮಚ, ಬೆಲ್ಲ 1 ಚಮಚ, ಕರಿಬೇವು ಸ್ವಲ್ಪ.

ಮಾಡುವ ವಿಧಾನ: ಮೊದಲು ಅಕ್ಕಿಯಿಂದ ಹಾಕಿ ಅನ್ನ ಮಾಡಿಕೊಳ್ಳಬೇಕು. ಒಂದು ಬಾಣಲಿಗೆ 2 ಚಮಚ ಎಣ್ಣೆ ಹಾಕಿ, ಅದಕ್ಕೆ ಮೆಣಸಿನಕಾಯಿ ಜೀರಿಗೆ ಬೆಳ್ಳುಳ್ಳಿ ಕರಿಬೇವು ಸೇರಿಸಿ ಹುರಿದುಕೊಳ್ಳಿ, ನಂತರ ಹುರಿದಿಟ್ಟುಕೊಂಡ ಸಾಮಗ್ರಿಗಳ ಜೊತೆ ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲಿಯನ್ನು ಬಿಸಿಗಿಟ್ಟು ಅದಕ್ಕೆ ಉಳಿದ ಎಣ್ಣೆಯನ್ನು ಹಾಕಿ ಸಾಸಿವೆ ಕರಿಬೇವಿನ ಒಗ್ಗರಣೆ ಮಾಡಿಕೊಂಡು, ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಹುರಿಯಿರಿ, ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ, ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಹರಿಶಿಣ, ಬೆಲ್ಲ ಸೇರಿಸಿ ಎಣ್ಣೆ ಬಿಡುವವರೆಗೂ ಚೆನ್ನಾಗಿ ಕುದಿಸಿ ಕೊಳ್ಳಿ. ಈ ಮಿಶ್ರಣವನ್ನು ಮಾಡಿಟ್ಟುಕೊಂಡ ಅನ್ನಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ಮುದ್ದೆಯ ರೀತಿ ಉಂಡೆ ಕಟ್ಟಿಕೊಳ್ಳಬಹುದು ಅಥವಾ ಹಾಗೆಯೇ ಬಡಿಸಬಹುದು. ಈಗ ರುಚಿಯಾದ ಹಳ್ಳಿ ಶೈಲಿಯ ಬುತ್ತಿ ಅನ್ನ ಅಥವಾ ಹುಳಿಯನ್ನ ಸವಿಯಲು ಸಿದ್ಧ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.