ಗುರುವಾರ , ಅಕ್ಟೋಬರ್ 6, 2022
27 °C

Video| ನಿತೀಶ್ ಮುಂದಿವೆ ಹಲವು ಸವಾಲು!

ಬಿಹಾರದಲ್ಲಿ ಮಹಾಮೈತ್ರಿಕೂಟದೊಂದಿಗಿನ ಸಖ್ಯದ ನಂತರವೂ ಹಲವು ಬದಲಾವಣೆ, ಸವಾಲುಗಳಿಗೆ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಎದುರುಗೊಳ್ಳಬೇಕಾಗುತ್ತದೆ. ನಿತೀಶ್‌ ಕುಮಾರ್ ಅವರ ಮುಂದಿರುವ ಪ್ರಮುಖ ಸವಾಲೆಂದರೆ ಬಿಹಾರದ ಆರ್ಥಿಕ ಸ್ಥಿತಿ. ಬಿಹಾರವು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ. ಬಿಜೆಪಿ ಬೆಂಬಲವಿದ್ದಾಗ ಕೇಂದ್ರದಿಂದ ನೆರವು ಪಡೆಯುವ ನಿರೀಕ್ಷೆ ಇತ್ತು. ಇನ್ನು ಮುಂದೆ, ಕೇಂದ್ರದ ನೆರವು ವಿಳಂಬವಾಗಬಹುದು. ಈ ನಿಟ್ಟಿನಲ್ಲಿ, ನಿತೀಶ್‌ ಸರ್ಕಾರದ ಮುಂದಿನ ಬಜೆಟ್‌ನ ಸ್ವರೂಪ ಹೇಗಿರಲಿದೆ ಎಂಬುದು ಕೂಡ ಕುತೂಹಲ ಮೂಡಿಸಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...