ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ

Last Updated 6 ಏಪ್ರಿಲ್ 2021, 12:06 IST
ಅಕ್ಷರ ಗಾತ್ರ

ಭೂಮಿ ಮೇಲಿನ ಸ್ವರ್ಗ ಎಂದು ಜಮ್ಮು-ಕಾಶ್ಮೀರವನ್ನು ಬಣ್ಣಿಸಲಾಗುತ್ತದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮುಕುಟವಿಟ್ಟಂತೆ ಇರುವ ಗಿರಿಶಿಖರಗಳಿಗೆ ಈಗ ಮತ್ತೊಂದು ಹೆಮ್ಮಯ ಗರಿ ಮೂಡುತ್ತಿದೆ.ರುದ್ರರಮಣೀಯ ಜಮ್ಮು-ಕಾಶ್ಮೀರದಲ್ಲಿ ಉತ್ತರ ರೈಲ್ವೆ, ಜಗತ್ತಿನಲ್ಲೇ ಅತ್ಯಂತ ವಿಶಿಷ್ಠ ರೈಲ್ವೆ ಸೇತುವೆಯನ್ನು ಸಜ್ಜುಗೊಳಿಸುತ್ತಿದ್ದು, ಕಾಶ‌್ಮೀರದಿಂದ ಕನ್ಯಾಕುಮಾರಿಯವರೆಗಿನ ರೈಲ್ವೆ ಸಂಪರ್ಕಕ್ಕೆ ಅನುವು ಮಾಡಿಕೊಡುತ್ತಿದೆ.

ಚೆನಾಬ್ ನದಿ ಮೇಲಿನ ರೈಲ್ವೆ ಸೇತುವೆ, ಜಮ್ಮು-ಕಾ‌ಶ್ಮೀರದ ಜನಜೀವನಕ್ಕೆ ನೆರವಾಗುವ ಜತೆಗೆ, ಪ್ರವಾಸೋದ್ಯಮ, ವ್ಯಾಪಾರ ಮತ್ತು ರಕ್ಷಣಾ ಉದ್ದೇಶಕ್ಕೆ ಬಳಕೆಯಾಗಲಿದೆ. ಸರ್ವಋತು ಮಾರ್ಗ ಇದಾಗಿರಲಿದ್ದು, ಅತ್ಯಾಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನವನ್ನು ಈ ಸೇತುವೆ ಒಳಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿ ಮೇಲೆ ನಿರ್ಮಿಸಲಾಗುತ್ತಿರುವ ವಿಶ್ವದ ಅತಿಎತ್ತರದ ರೈಲ್ವೆ ಸೇತುವೆಯ ಕಮಾನು ಕಾಮಗಾರಿ ಸೋಮವಾರ ಪೂರ್ಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT