ಸೋಮವಾರ, ಏಪ್ರಿಲ್ 19, 2021
24 °C

VIDEO: ಅಸ್ಸಾಂನಲ್ಲಿ ಚಹಾದ ಎಲೆ ಕೊಯ್ಲು ಮಾಡಿದ ಪ್ರಿಯಾಂಕಾ ಗಾಂಧಿ

ಗುವಾಹಟಿ: ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭ ತೇಜ್ ಪುರ್‌ನ ಸಧಾರು ಟೀ ತೋಟಕ್ಕೆ ಭೇಟಿ ಕೊಟ್ಟ ಅವರು ಕಾರ್ಮಿಕ ಮಹಿಳೆಯರು ಜೊತೆ ಟೀ ಎಲೆಗಳನ್ನು ಕೊಯ್ಲು ಮಾಡಿ, ಅವರ ದುಃಖ ದುಮ್ಮಾನ ಆಲಿಸಿದರು. ಮಾರ್ಚ್ 27ರಂದು ಅಸ್ಸಾಂ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಇಲ್ಲಿ ಮೂರು ಹಂತಗಳಲ್ಲಿ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿದೆ.