ಗುರುವಾರ , ಅಕ್ಟೋಬರ್ 1, 2020
22 °C

Video | ಲಡಾಕ್: ಶಸ್ತ್ರಾಸ್ತ್ರ ಸಹಿತ ಸಜ್ಜಾದ ಭಾರತೀಯ ಸೇನೆ

ಚೀನಾ ಗಡಿಯಲ್ಲಿರುವ ಯುದ್ಧೋಪಕರಣಗಳ ಅಗತ್ಯ ನಿರ್ವಹಣೆ ಕಾರ್ಯ ನಡೆಯುತ್ತಿದೆ. ಪ್ರತಿಕೂಲ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸಲು ಭಾರತೀಯ ಸೇನೆ ಆರ್ಟಿಲರಿ ಇತ್ಯಾದಿಗಳನ್ನು ಸನ್ನದ್ದ ಸ್ಥಿತಿಯಲ್ಲಿ ಇಟ್ಟಿದೆ. ಸೇನೆಯ ಇಂಜಿನಿಯರ್‌ಗಳಿಂದ ಬೋಫೋರ್ಸ್ ಫಿರಂಗಿಗಳ ಕಾರ್ಯದ ಪರಿಶೀಲನೆ ನಡೆಯುತ್ತಿದೆ. ಎಲ್ಲಾ ರೀತಿಯ ಯುದ್ಧೋಪಕರಣಗಳನ್ನು ಸಮರ ಸನ್ನದ್ದ ಸ್ಥಿತಿಯಲ್ಲಿ ಇಡಲಾಗುತ್ತಿದೆ. ವಿಶೇಷ ವಾಹನಗಳಲ್ಲಿ ಅಗತ್ಯ ಬಿಡಿಭಾಗಗಳನ್ನು ಗಡಿಯ ಕೊನೆಯಲ್ಲಿರುವ ಸೈನಿಕ ಶಿಬಿರಗಳಿಗೆ ತಲುಪಿಸಲಾಗುತ್ತಿದೆ.