ಶುಕ್ರವಾರ, ಆಗಸ್ಟ್ 14, 2020
27 °C

ವಿಡಿಯೊ | ಮೈದುಂಬಿ ಹರಿಯುತ್ತಿರುವ ಎತ್ತಿಪೋತೆ ಜಲಪಾತ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಒಂಟಿಚಿಂತಾ ಸಂಗಾಪುರ ಮಧ್ಯೆ ಬರುವ ಎತ್ತಿಪೋತೆ ಜಲಪಾತ ಮರು ಜೀವ ಪಡೆದಿದ್ದು ಶುಕ್ರವಾರ ಸುರಿದ ಭಾರಿ ಮಳೆಗೆ ಮೈದುಂಬಿ ಹರಿಯುತ್ತಿದೆ. ಜಲಪಾತದ ಮೇಲ್ಭಾಗದ ತೆಲಂಗಾಣದಲ್ಲಿ ಸುರಿದ ಮಳೆಯಿಂದ ಎತ್ತಿಪೋತೆ ನಾಲೆಗೆ ಪ್ರವಾಹ ಬಂದಿದೆ. ಇದರಿಂದ ಮೇಲಿಂದ ನೀರು ಬೀಳುವ ಎರಡು ತಾಣಗಳು ನಯನ ಮನೋಹರವಾಗಿ ಗೋಚರಿಸುತ್ತ ಪ್ರವಾಸಿಗರನ್ನು ಸೆಳೆಯುತ್ತಿವೆ. ಕುಂಚಾವರಂ ಕಾಡಿನಲ್ಲಿ ಬರುವ ಚಿಂಚೋಳಿ ವನ್ಯಜೀವಿ ಧಾಮದ ಪ್ರಕೃತಿಯ ರಮಣೀಯ ತಾಣ ಸುವರ್ಣ ವರ್ಣದ ನೀರಿನಿಂದ ಕಂಗೊಳಿಸುತ್ತಿದೆ – ಪ್ರಜಾವಾಣಿ ವಿಡಿಯೊ