ಗುರುವಾರ , ಜೂನ್ 17, 2021
22 °C

Video-ಬೆಳ್ತಂಗಡಿ: ಹಳ್ಳದಲ್ಲಿ ನೀರುನಾಯಿಗಳು ಪ್ರತ್ಯಕ್ಷ

ಉಜಿರೆ (ಮಂಗಳೂರು): ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಬಳಿಯ ಹಳ್ಳದಲ್ಲಿ ಶನಿವಾರ ನೀರುನಾಯಿಗಳ ಹಿಂಡು ಕಂಡುಬಂದಿವೆ. ‘ಕಳೆದ ಅಕ್ಟೋಬರ್‌ನಲ್ಲಿ ರಾತ್ರಿ ಹೊತ್ತು ನೀರುನಾಯಿಗಳು ಕಂಡುಬಂದಿದ್ದವು.

ಇದೀಗ ಹಗಲಿನಲ್ಲಿ 25ಕ್ಕಿಂತಲೂ ಅಧಿಕ ನೀರುನಾಯಿಗಳು ಫಲ್ಗುಣಿ ನದಿಯ ಸಂಪರ್ಕ ಹಳ್ಳದಲ್ಲಿ ಕಂಡುಬಂದಿರುವುದು ಆಶ್ಚರ್ಯ ಉಂಟುಮಾಡಿದೆ’ ಎಂದು ಸ್ಥಳೀಯರಾದ ಕುಬಳಬೆಟ್ಟುಗುತ್ತು ನಿವಾಸಿ ಸಂಪತ್ ಕೊಂಬ ತಿಳಿಸಿದ್ದಾರೆ.