ಶನಿವಾರ, ಸೆಪ್ಟೆಂಬರ್ 18, 2021
30 °C

ನೋಡಿ: ಬೊಮ್ಮಾಯಿ–ದೇವೇಗೌಡರ ಭೇಟಿಯ ಗುಟ್ಟೇನು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ವರಿಷ್ಠರೂ ಮಾಜಿ ಪ್ರಧಾನಿಯೂ ಆಗಿರುವ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿರುವುದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ.

ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಜೆಡಿಎಸ್‌ ರಕ್ಷಣೆಯ ಕೋಟೆ ಕಟ್ಟುವುದು, ರಾಷ್ಟ್ರಮಟ್ಟದಲ್ಲಿ ತಮ್ಮ ವಿರೋಧಿ ಪಾಳೆಯ ಒಂದುಗೂಡುವುದನ್ನು ತಡೆಯುವ ಎಣಿಕೆ ಮೋದಿ ಅವರದ್ದಾಗಿದೆಯೇ ಎಂಬ ಚರ್ಚೆಯೂ ನಡೆದಿದೆ.

ಇದರಿಂದ ಜೆಡಿಎಸ್‌ಗೆ ನಷ್ಟವೋ ಬಿಜೆಪಿಗೆ ಲಾಭವೋ ಎಂಬುದನ್ನು ಮುಂದಿನ ದಿನಗಳ ವಿದ್ಯಮಾನವೇ ನಿರ್ಧರಿಸಲಿದೆ. ಈ ಬೆಳೆವಣಿಗೆಗಳ ಬಗ್ಗೆ ಪ್ರಜಾವಾಣಿ ರಾಜಕೀಯ ಬ್ಯೂರೋ ಮುಖ್ಯಸ್ಥ ವೈ.ಗ. ಜಗದೀಶ್ ಇಲ್ಲಿ ವಿಶ್ಲೇಷಿಸಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...