ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO: ನೋಡಬನ್ನಿ ನೃಪತುಂಗದ ‘ಮಂಜು’...

Last Updated 25 ಫೆಬ್ರುವರಿ 2021, 4:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿತ್ಯ ಬೆಳಗಾದರೆ ಸಾಕು ಆ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ನೂರಾರು ಜನ ಬರುತ್ತಾರೆ. ಸೂರ್ಯೋದಯದ ಅಂದದ ಚಿತ್ರಣ, ಕೆಂಬಣ್ಣದ ನಡುವೆ ಅರಳುವ ರವಿಯ ಚುಮುಚುಮು ಬೆಳಕಿನ ಕಿರಣಗಳ ಚಿತ್ತಾರ. ದಿನಪೂರ್ತಿ ಚೈತನ್ಯದಿಂದಿರಲು ನೆರವಾಗುವ ವಾಕಿಂಗ್‌ಗೆ ಸೇರುವ ಜನ ಆ ಸ್ಥಳವನ್ನು ನೋಡಲು ಅತ್ಯಂತ ಪ್ರೀತಿಯಿಂದ ಬಯಸಿ ಬರುತ್ತಾರೆ. ಅದು ಯಾವುದು ಗೊತ್ತೇ? ಹುಬ್ಬಳ್ಳಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ನೃಪತುಂಗ ಬೆಟ್ಟ.

ಬೆಟ್ಟದ ಮೇಲಿನಿಂದ ನೋಡಿದರೆ ಕಣ್ಣು ಹಾಯಿಸಿದಷ್ಟೂ ಪ್ರಕೃತಿಯ ಸೊಬಗು ಕಂಗೊಳಿಸುತ್ತದೆ. ಪೂರ್ತಿ ಹುಬ್ಬಳ್ಳಿಯೇ ಮಂಜು ಹಾಸಿ ಹೊದ್ದು ಮಲಗಿದೆಯೇನೋ ಎನ್ನುವಂತೆ ಭಾಸವಾಗುತ್ತದೆ. ಮಂಜು ಹೊದ್ದ ಆ ನಯನ ಮನೋಹರ ದೃಶ್ಯವನ್ನು ನೋಡಿದಾಗಲಂತೂ ಉತ್ತರದ ರಾಜ್ಯಗಳ ವಾತಾವರಣ ಕಣ್ಣಮುಂದೆ ಕಟ್ಟಿದಂತಾಗುತ್ತದೆ. ಆಹ್ಲಾದಕರ ವಾತಾವರಣ ಅನುಭವಿಸುತ್ತಲೇ, ಮೈಗೆ ತಾಕುವ ಮಂಜಿನ ಹನಿಗಳ ಖುಷಿಯಲ್ಲಿ ಮಿಂದೆದ್ದು ಸಣ್ಣದಾಗಿ ಮೈನಡುಗಿಸುವ ಚಳಿಯ ನಡುವೆ ಸ್ನೇಹಿತರೆಲ್ಲರೂ ಒಂದೆಡೆ ಸೇರಿ ವಾಕಿಂಗ್‌ ಮಾಡುವ ಖುಷಿಯೇ ಬೇರೆ.

ಮಂಜಿನ ನಡುವೆ ಮರಗಿಡಗಳು ಸೂಸುವ ತಂಗಾಳಿ ವಾಕಿಂಗ್‌ ಪ್ರಿಯರ ಖುಷಿ ಹೆಚ್ಚು ಮಾಡುತ್ತದೆ. ಗಿಡಗಳ ನಡುವೆ ಕಾಣಿಸುವ ಸೂರ್ಯನ ಕಿರಣಗಳು ಪ್ರಕೃತಿಯನ್ನು ಇನ್ನಷ್ಟು ಪ್ರೀತಿಯಿಂದ ಕಾಣುವಂತೆ ಮಾಡುತ್ತವೆ. ಬೆಟ್ಟದಲ್ಲಿರುವ ನವಿಲುಗಳ ನೃತ್ಯ ವಾಕಿಂಗ್‌ ಪ್ರಿಯರ, ಮಕ್ಕಳ ಖುಷಿಯನ್ನು ಹೆಚ್ಚು ಮಾಡಿವೆ. ನವಿಲುಗಳ ಜೊತೆ ಮಕ್ಕಳೂ ಕುಣಿಯವಂತೆ ಮಾಡುತ್ತಿವೆ. ಮಕ್ಕಳು ಜೋಕಾಲಿಯಾಡಿ ನಲಿಯುತ್ತಾರೆ.

#Prajavani #PrajavaniNews

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net

ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT