ಮಂಗಳವಾರ, ಏಪ್ರಿಲ್ 7, 2020
19 °C

ಮೈಸೂರು ಲಾಕ್ ಡೌನ್ | ಸಂಕಷ್ಟದಲ್ಲಿದ್ದವರಿಗೆ ಪೊಲೀಸರಿಂದ ಆಹಾರ ಪೂರೈಕೆ

ಮೈಸೂರು: ಲಾಕ್ ಡೌನ್ ನಿಂದ ನಗರದಲ್ಲಿ 250ಕ್ಕೂ ಅಧಿಕ ಮಂದಿ ಸಂಕಷ್ಟದಲ್ಲಿ ಸಿಲುಕಿದ್ದಾರೆ‌.

ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಹೋಟೆಲ್ ನಲ್ಲಿ ಊಟ ಮಾಡಿ ರಸ್ತೆಬದಿಯಲ್ಲಿ, ಅಂಗಡಿಗಳ ಮುಂದೆ ಮಲಗುತ್ತಿದ್ದವರು ಇದೀಗ ಹೋಟೆಲ್ ಗಳು ಬಂದ್ ಆಗಿರುವುದರಿಂದ ಹಸಿವಿನಿಂದ ಬಳಲುತ್ತಿದ್ದಾರೆ.

ಇವರಿಗೆ ಪೊಲೀಸರು, ವಿವಿಧ ಸಂಘ, ಸಂಸ್ಥೆಗಳು ಆಹಾರ ಪೊಟ್ಟಣಗಳನ್ನು ವಿತರಿಸುವ ಕೆಲಸ ಮಾಡುತ್ತಿವೆ. ಗುರುವಾರ ಬೆಳಿಗ್ಗೆ ಇವರಿಗೆಲ್ಲ ಡಿಸಿಪಿ ಪ್ರಕಾಶಗೌಡ ಆಹಾರ ಪೊಟ್ಟಣ ವಿತರಿಸಿದರು. ಕೆಲವರಿಗೆ ಇವು ಸಾಕಾಗಲಿಲ್ಲ. ಸಂಘ, ಸಂಸ್ಥೆಯ ಪ್ರತಿನಿಧಿಗಳು ಬರಬಹುದು ಎಂದು ಆಹಾರ ಸಿಗದ ಇನ್ನಷ್ಟು ಮಂದಿ ಕಾದು ಕುಳಿತಿದ್ದರು.

ಪ್ರತಿಕ್ರಿಯಿಸಿ (+)