ಶುಕ್ರವಾರ, ಸೆಪ್ಟೆಂಬರ್ 17, 2021
22 °C

Video| ಮಲಪ್ರಭಾ ಪ್ರವಾಹಕ್ಕೆ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಣ್ಣು ಕುಸಿತ, ಸಂಚಾರ ಬಂದ್

ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದಿಂದ ಬಾಧಿತವಾಗಿದ್ದ  ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಣ್ಣು ಕುಸಿದು ಭಾನುವಾರ ಮುಂಜಾನೆ ಎರಡು ಲಾರಿಗಳು ಸಿಲುಕಿಕೊಂಡಿವೆ. ಇದರಿಂದ ಹೆದ್ದಾರಿಯಲ್ಲಿ ಭಾರಿ ವಾಹನ ಸಂಚಾರ ಸ್ಥಗಿತಗೊಂಡಿದೆ. 

ಕಾರು, ಟಂಟಂ, ಬೈಕ್ ನಂತಹ ಲಘು ವಾಹನಗಳು ಮಾತ್ರ ಓಡಾಟ ನಡೆಸಿವೆ.

ಮಲಪ್ರಭಾ ನದಿ ನೆರೆಯಿಂದ ಆವೃತವಾಗಿದ್ದ ಹೆದ್ದಾರಿಯಲ್ಲಿ ಕಳೆದ ಮಂಗಳವಾರ ನಸುಕಿನಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಎರಡು ದಿನಗಳ ನಂತರ ನೆರೆ ಇಳಿದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿತ್ತು. ಶನಿವಾರದಿಂದ ಮತ್ತೆ ಸಂಚಾರ ಆರಂಭವಾಗಿತ್ತು.