ಗುರುವಾರ , ಮೇ 28, 2020
27 °C

ಅರಮನೆ ಮೈದಾನದಲ್ಲಿ ಒಡಿಶಾ ವಲಸಿಗರು: ರೈಲಿಗೆ ತೆರಳಲು ನೂಕು ನುಗ್ಗಲು

ತಮ್ಮ ರಾಜ್ಯಕ್ಕೆ ತೆರಳಲು ಒಡಿಶಾ ವಲಸಿಗರು ಸಾವಿರಾರು ಸಂಖ್ಯೆಯಲ್ಲಿ ಅರಮನೆ ಮೈದಾನಕ್ಕೆ ಶನಿವಾರ ಆಗಮಿಸಿದ್ದು ಬಸ್ಸುಗಳನ್ನು ಹತ್ತಲು ನೂಕು ನುಗ್ಗಲು ಉಂಟಾಗಿತ್ತು. ಎಲ್ಲಾ ವಲಸಿಗರಿಗೂ ಒಡಿಶಾಗೆ ತೆರಳಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂಬ ಸಂದೇಶ ಶುಕ್ರವಾರ ರಾತ್ರಿ ಬಂದಿದ್ದರಿಂದ ವಲಸಿಗರು ಗುಂಪು ಗುಂಪಾಗಿ ಅರಮನೆ ಮೈದಾನದ ತ್ರಿಪುರವಾಸಿನಿ ದ್ವಾರದ ಬಳಿಗೆ ಆಗಮಿಸಿದ್ದರು.