ಗುರುವಾರ , ಜೂನ್ 17, 2021
29 °C

ನೋಡಿ: ಚೋಕ್ಸಿ ನನ್ನ 'ಶುಗರ್ ಡ್ಯಾಡಿ'ಯಲ್ಲ: ಬಾರ್ಬರಾ ಜರಾಬಿಕಾ ಸ್ಪಷ್ಟನೆ

ಮೆಹುಲ್ ಚೋಕ್ಸಿ ನನ್ನ ಶುಗರ್ ಡ್ಯಾಡಿಯಲ್ಲ. ನಾನು ಅವರ ಗರ್ಲ್ ಫ್ರೆಂಡ್ ಅಲ್ಲ ಎಂದು ಬಾರ್ಬರಾ ಜರಾಬಿಕಾ ಎಎನ್‌ಐ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ನನ್ನ ಅಪಹರಣದ ಹಿಂದೆ ನನ್ನ ಗರ್ಲ್‌ಫ್ರೆಂಡ್ ಬಾರ್ಬರಾ ಜರಾಬಿಕಾ ಕೈವಾಡವಿದೆ ಎಂದು ಚೋಕ್ಸಿ, ಆಂಟಿಗುವಾ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು. ಇದೀಗ, ಈ ಬಗ್ಗೆ ಬಾರ್ಬರಾ ಜಬಾರಿಕಾ ಸ್ಪಷ್ಟನೆ ನೀಡಿದ್ದಾರೆ. ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆಯ ಕಾನೂನು ಹೋರಾಟದಲ್ಲಿ ತೊಡಗಿರುವ ಚೋಕ್ಸಿ, ಸದ್ಯ ಡೊಮಿನಿಕಾದಲ್ಲಿದ್ದಾರೆ. ಅಲ್ಲಿಯೂ ಅಕ್ರಮ ಪ್ರವೇಶದ ಆರೋಪ ಹೊತ್ತಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp