ಸಂಜೆ ಏಳು ಗಂಟೆ. ನಮ್ಮ ಟ್ಯಾಕ್ಸಿ ಹೋಗಿ ನಿಂತಿದ್ದೇ ತಡ, ಗೇಟು ತೆಗೆದಿದ್ದು ಸಮವಸ್ತ್ರ ಧರಿಸಿದ ಮಹಿಳಾ ಸೆಕ್ಯುರಿಟಿ ಗಾರ್ಡ್. ಇಬ್ಬರು ಹದಿಹರೆಯದ ಹುಡುಗಿಯರು ಬಂದು ಇಣುಕಿದರು. ರಿಸೆಪ್ಶನ್ ಕೌಂಟರ್ನಲ್ಲಿಯೂ ಇಬ್ಬರು ನಗುಮುಖದ ಹೆಣ್ಣುಮಕ್ಕಳು. ನೆನಪಾಯಿತು, ರೂಮ್ ಬುಕ್ ಮಾಡುವಾಗ ಮಾತನಾಡಿದ್ದೂ ಇವರೇ. ರೂಮಿನ ವಿವರಗಳನ್ನು ಪಡೆದು ಹೊರಟೆವು.

ಮೊದಲು ಎದುರಾದ ಇಬ್ಬರು ಹುಡುಗಿಯರು ಕಾರಿನ ಡಿಕ್ಕಿಯಿಂದ ಸೂಟ್ಕೇಸ್, ಬ್ಯಾಗ್ಗಳನ್ನು ಎತ್ತಿ ‘ಆಯಿಯೇ’ ಎನ್ನುತ್ತ ಮುಂದೆ ಸಾಗಿದರು. ಎರಡನೇ ಮಹಡಿಯಲ್ಲಿ ನಮ್ಮ ರೂಮ್ ಇತ್ತು. ‘ಲಿಫ್ಟ್ ಇಲ್ಲವೇ?..’ ಹೆಜ್ಜೆ ಕಿತ್ತಿಡಲು ಪ್ರಯಾಸಪಡುತ್ತಿದ್ದ ಮೇರಿ ಕೇಳಿದರು. ‘ಇಲ್ಲ..’ ಎನ್ನುತ್ತ ಅವರಿಬ್ಬರೂ ಭಾರ ಹೊತ್ತು ಸರಸರ ಮೆಟ್ಟಿಲು ಏರಿದರು. ಲಗೇಜ್ ಇಳಿಸಿದವರೇ ರೂಮ್ ಕುರಿತು ತಿಳಿಸಿ ಹೊರಟರು. ಟಿವಿ, ಪುಟ್ಟ ಫ್ರಿಜ್, ಎತ್ತರದ ನಿಲುವುಗನ್ನಡಿ, ಕಪಾಟು, ಡಬಲ್ ಬೆಡ್ ಒಳಗೊಂಡ ಶಿಸ್ತಾದ ರೂಮ್. ಟೇಬಲ್ ಮೇಲೆ ಕಣ್ಣಿಗೆ ರಾಚುವಂತಹ ‘ನೋ ರೂಮ್ ಸರ್ವಿಸ್’ ಎಂಬ ಫಲಕವಿತ್ತು.

ಬಾತ್ರೂಮ್ನ ಒಳಹೊಕ್ಕ ಮೇರಿ ಅದೇ ವೇಗದಲ್ಲಿ ಹೊರಬಂದರು. ‘ಇಲ್ಲೆಂತದೂ ಸರಿ ಇಲ್ಲ, ಇಲ್ನೋಡಿ..’ ಎನ್ನುತ್ತ ನಲ್ಲಿಯ ಹಿಡಿಕೆ ಕೈಗಿತ್ತರು. ದೂರು ಸಲ್ಲಿಸಿದ ನಂತರ ರಾತ್ರಿ ಹತ್ತು ಗಂಟೆಗೆ ಒಬ್ಬಾಕೆ ಸ್ಪಾನರ್ ಹಿಡಿದು ಬಂದಳು. ಆದರೆ ಎಷ್ಟು ಪ್ರಯತ್ನ ಪಟ್ಟರೂ ಬಿರಡೆ ತಿರುಗಿಸುವುದಕ್ಕಾಗಲಿಲ್ಲ. ‘ಸಾರಿ ಮೇಡಂ, ನಾಳೆ ಎಕ್ಸ್ಪರ್ಟ್ ಕರೆಸಿ ರಿಪೇರಿ ಮಾಡಿಸ್ತೀವಿ...’ ಎಂದು ಹೊರಟಳು.

ಊಟಕ್ಕೆ ಕೆಳಗೆ ರೆಸ್ಟೊರೆಂಟ್ ತಲುಪಿದೆವು. ಉದ್ದ ಮೆನು ಹಿಡಿದಾಕೆ ಕಂಚಲ್. ಬಗ್ಗಿ ಒಳಗೆ ಅಡುಗೆಮನೆಯತ್ತ ಇಣುಕಿದರೆ ಮೂರ್ನಾಲ್ಕು ಹೆಣ್ಣುಮಕ್ಕಳು ಅಡುಗೆ ಮಾಡುತ್ತಿದ್ದರು. ಊಟ ಮುಗಿದ ನಂತರ ಟೇಬಲ್ ಒರೆಸಲು ಬಂದಿದ್ದೂ ಹೆಣ್ಣುಮಗಳೇ.

ಅದು ಮಹಾರಾಷ್ಟ್ರ ಪ್ರವಾಸೋದ್ಯಮ ನಿಗಮದ ಮಹಿಳೆಯರೇ ನಡೆಸುವ ಔರಂಗಾಬಾದ್ನ ‘ಔರಂಗಾಬಾದ್ ರೆಸಾರ್ಟ್’. ಇದು ರಾಜ್ಯದ ‘ಆಯಿ’ ಯೋಜನೆಯ ಭಾಗ. ಪ್ರವಾಸೀ ವಲಯದಲ್ಲೂ ಲಿಂಗ ಸಮಾನತೆ ತೋರಹೊರಟಿರುವ ಸರ್ಕಾರದ ಹೊಸ ಹೆಜ್ಜೆ. ಐದಾರು ಕಟ್ಟಡಗಳ ಆ ಸಮುಚ್ಚಯದಲ್ಲಿ ಸ್ವಾಗತ ಕೌಂಟರ್ನಿಂದ ಹಿಡಿದು ರಾತ್ರಿಯ ಸೆಕ್ಯುರಿಟಿಯವರೆಗೆ ಎಲ್ಲವೂ ಮಹಿಳೆಯರ ಸುಪರ್ದಿಯಲ್ಲಿ ನಡೆಯುತ್ತವೆ. ಮ್ಯಾನೇಜರ್, ಹೌಸ್ ಕೀಪರ್ಸ್, ರಿಸೆಪ್ಶನಿಸ್ಟ್, ಅಡುಗೆ ಸಿಬ್ಬಂದಿ, ಬಡಿಸುವವರು, ಉದ್ಯಾನದ ಮೇಲ್ವಿಚಾರಕರು ಹಾಗೂ ಸೆಕ್ಯುರಿಟಿ ಗಾರ್ಡ್ಸ್ ಎಲ್ಲರೂ ಸೇರಿ ಸುಮಾರು ಇಪ್ಪತ್ತು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಕೋರ್ಸ್ ಮಾಡಿ ಬಂದವರಿಗೆ ಆದ್ಯತೆ.

ಎರಡು ದಿನಗಳ ನಂತರ ಔರಂಗಾಬಾದ್ನ ಸುತ್ತಮುತ್ತಲ ಅಜಂತಾ, ಎಲ್ಲೋರಾ, ಲೋಣಾರ್ ಸರೋವರಗಳ ಪ್ರವಾಸ ಮುಗಿಸಿ ಹೊರಟುನಿಂತಿದ್ದೆವು. ಪ್ರತಿದಿನ ಸೊಗಸಾದ ಬೆಳಗಿನ ತಿಂಡಿ ಒದಗಿಸಿದ ಅಡುಗೆಮನೆಯ ಸಿಬ್ಬಂದಿ ಮುಖ ನೋಡಿ ನಗುವಷ್ಟು ಪರಿಚಯಸ್ಥರಾಗಿದ್ದರು. ಶೋಭಾಳದ್ದು ಮುಂಜಾನೆ ಆರರಿಂದ ಮಧ್ಯಾಹ್ನ ಮೂರರವರೆಗೆ ಮತ್ತೂ ಮೂವರು ಸಹೋದ್ಯೋಗಿಗಳೊಂದಿಗೆ ಅಡುಗೆಯ ಜವಾಬ್ದಾರಿ. ಎಂ.ಎ ಓದುತ್ತಿರುವ ಕಂಚಲ್ ಬೆಳಿಗ್ಗೆ ಮೂರು ತಾಸು ಇಲ್ಲಿ ಕೆಲಸ ಮಾಡುತ್ತಾಳೆ. ‘ಪುರುಷಯಾತ್ರಿಗಳಿಂದ ಏನೂ ತೊಂದರೆಯಾಗಿಲ್ಲವೆ?’ ಮೆಲುಧ್ವನಿಯಲ್ಲಿ ಕಂಚಲ್ಳನ್ನು ಕೇಳಿದೆ. ‘ಐಸೀ ಬಾತ್ ನಹೀ...’ ಎನ್ನುತ್ತ ಆಕೆಯೂ ಟೇಬಲ್ ಒರೆಸುತ್ತಲೇ ಪಿಸುಮಾತಿನಲ್ಲಿ ಗುಟ್ಟು ಬಿಚ್ಚಿಟ್ಟಳು. ಒಂದೆರಡು ಬಾರಿ ಗಂಡಸರು ಅನುಚಿತವಾಗಿ ನಡೆದುಕೊಂಡಿದ್ದರಿಂದಲೇ ರೂಮ್ ಸರ್ವಿಸ್ ಸ್ಥಗಿತಗೊಳಿಸಲಾಗಿದೆ. ಈಗ ಕೂಲಂಕಶವಾಗಿ ವಿಚಾರಣೆ ಮಾಡಿಯೇ, ಕುಟುಂಬದವರ ಜೊತೆಗೆ ಬರುವವರಿಗಷ್ಟೇ ಒಳಗೆ ಪ್ರವೇಶ ನೀಡಲಾಗುತ್ತದೆ. ಮುನ್ನೆಚ್ಚರಿಕೆಯಾಗಿ ರಾತ್ರಿ ಮೂರನೇ ಪಾಳಿಗೆಂದು ಪುರುಷ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಬದಲಾವಣೆಯ ಗಾಳಿ ಬೀಸಿದೆಯಾದರೂ ಅದು ಪಸರಿಸಿ ಸ್ಥಿರವಾಗಲು ಇನ್ನೂ ಸಮಯ ಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.