ಹಬ್ಬ–ಹರಿದಿನಗಳು, ಮದುವೆ ಮುಂಜಿಯಂತಹ ಕಾರ್ಯಕ್ರಮಗಳಲ್ಲಿ ಭಾರತೀಯ ಹೆಣ್ಣುಮಕ್ಕಳು ತಯಾರಾಗುವುದನ್ನು ನೋಡುವುದೇ ಅಂದ. ಭಾರತೀಯ ಸಂಪ್ರದಾಯಿಕ ಶೈಲಿಯ ಉಡುಪುಗಳನ್ನು ಧರಿಸುವ ಮೂಲಕ ಸಾಂಪ್ರದಾಯಿಕ ನೆಲೆಗಟ್ಟಿಗೆ ಒತ್ತು ನೀಡುವ ಜೊತೆಗೆ ಸೌಂದರ್ಯ ಹೆಚ್ಚಿಸಿಕೊಳ್ಳುವತ್ತಲೂ ಗಮನ ಹರಿಸುತ್ತಾರೆ. ಹಬ್ಬದ ದಿನಗಳಲ್ಲಿ ಇತ್ತೀಚೆಗೆ ಹೆಣ್ಣುಮಕ್ಕಳು ಹೆಚ್ಚಾಗಿ ಘಾಗ್ರಾ ಧರಿಸಲು ಇಷ್ಟಪಡುತ್ತಾರೆ. ಘಾಗ್ರಾ ಸೆಟ್ ಧರಿಸುವುದರಿಂದ ಅಂದ ಹೆಚ್ಚುವುದರಲ್ಲಿ ಸಂಶಯವಿಲ್ಲ. ಇದು ದಪ್ಪಗೆ, ತೆಳ್ಳಗೆ ಹೀಗೆ ಪ್ರತಿಯೊಬ್ಬರಿಗೂ ಹೊಂದುತ್ತದೆ. ದಸರಾ ಶುರುವಾಗಿದೆ, ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಇದನ್ನು ಧರಿಸಿದರೆ ಸಂಪ್ರದಾಯಕ್ಕೂ ಒತ್ತು ಕೊಡಬಹುದು. ಇದನ್ನು ಧರಿಸಿದಾಗ ಇದರೊಂದಿಗೆ ಹೊಂದುವಂತಹ ಓಡ್ನಿ, ಬಳೆ, ಚಪ್ಪಲಿ, ಆಭರಣಗಳನ್ನು ಧರಿಸಿದರೆ ಪರಿಪೂರ್ಣವಾಗಿ ತಯಾರಾಗಬಹುದು.

ಓಡ್ನಿ

ಘಾಗ್ರಾ ಅಂದಾಕ್ಷಣ ನೆನಪಾಗುವುದು ದುಪಟ್ಟಾ ಅಥವಾ ಓಡ್ನಿ. ಹಿಂದೆಲ್ಲಾ ಘಾಗ್ರಾದೊಂದಿಗೆ ಓಡ್ನಿ ಸಿಗುತ್ತಿತ್ತು. ಈಗ ಓಡ್ನಿಯನ್ನು ಬೇರೆಯಾಗಿಯೇ ಖರೀದಿಸಬಹುದು. ಘಾಗ್ರಾ ಸೆಟ್ನೊಂದಿಗೆ ಬೇರೆಯದ್ದೇ ಬಣ್ಣದ ಓಡ್ನಿಯನ್ನು ಮ್ಯಾಚಿಂಗ್ ಮಾಡಿಕೊಳ್ಳಬಹುದು. ಸರಳ ಡಿಸೈನ್ ಇರುವ ಘಾಗ್ರಾ ಸೆಟ್ನೊಂದಿಗೆ ಗ್ರ್ಯಾಂಡ್ ಡಿಸೈನ್ನ ಓಡ್ನಿ ಧರಿಸಬಹುದು. ಇದು ಸಿಲ್ಕ್, ಕಾಟನ್, ಸಿಂಥೆಟಿಕ್ನಲ್ಲೂ ಲಭ್ಯವಿದೆ. ಸರಳ ಡ್ರೆಸ್ನೊಂದಿಗೆ ಐಷಾರಾಮಿ ದುಪಟ್ಟಾ ಧರಿಸುವುದರಿಂದ ಸುಂದರವಾಗಿ ಕಾಣಬಹುದು.

ನೂಲಿನ ಬಳೆ

ಘಾಗ್ರಾದೊಂದಿಗೆ ಕೈ ತುಂಬಾ ಬಳೆ ಧರಿಸಬೇಕು. ಅದೇ ಬಣ್ಣದ್ದೇ ಬಳೆಯನ್ನು ಕೈ ಪೂರ್ತಿ ಧರಿಸುವುದರಿಂದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಇದರೊಂದಿಗೆ ನೂಲಿನ ಬಳೆ ಹೆಚ್ಚು ಹೊಂದುತ್ತದೆ. ಬಳೆಗೆ ಸಂಪೂರ್ಣವಾಗಿ ನೂಲು ಸುತ್ತಿದ್ದು ಅದರ ಮೇಲೆ ಕುಂದನ್ ಹರಳನ್ನು ಕೂರಿಸಿರುತ್ತಾರೆ. ಹರಳಿನಲ್ಲಿ ವಿವಿಧ ಚಿತ್ತಾರವನ್ನು ಮೂಡಿಸಿದ್ದು ಇದು ನೋಟವನ್ನೇ ಬದಲಿಸುವಂತೆ ಮಾಡುವುದಲ್ಲದೇ ಕೈಯ ಅಂದವನ್ನೂ ಹೆಚ್ಚಿಸುತ್ತದೆ.

ಜೈಪುರ ಝುಟ್ಟಿ

ಇದಕ್ಕೆ ರಾಜಸ್ತಾನಿ ಅಥವಾ ಕೊಲ್ಲಾಪುರಿ ಚಪ್ಪಲಿ ಹೆಚ್ಚು ಹೊಂದುತ್ತದೆ. ಘಾಗ್ರಾ ಬಣ್ಣದ್ದೇ ಚಪ್ಪಲಿ ಧರಿಸಬಹುದು. ಇದರಲ್ಲೂ ಹರಳು ಹಾಗೂ ಕನ್ನಡಿಗಳನ್ನು ಜೋಡಿಸಿರುವ ಕಸೂತಿ ಚಪ್ಪಲಿ ಹೊಂದುತ್ತವೆ. ಹಾಗೆಯೇ ಜೈಪುರ ಝುಟ್ಟಿ– ಮೊಜಾರಿ ಚಪ್ಪಲಿಯನ್ನು ಕೂಡ ಮ್ಯಾಚಿಂಗ್ ಮಾಡಿಕೊಳ್ಳಬಹುದು. ಇದರೊಂದಿಗೆ ಬಣ್ಣದ ಅರೇಬಿಯನ್ ಚಪ್ಪಲಿಯನ್ನೂ ಧರಿಸಬಹುದು.

ಆಭರಣಗಳು

ಘಾಗ್ರಾ ಬಣ್ಣದ ಮ್ಯಾಚಿಂಗ್ ಆಭರಣಗಳನ್ನು ಧರಿಸಬಹುದು. ಇದರಿಂದ ನಿಮ್ಮ ನೋಟವೇ ಬದಲಾಗುತ್ತದೆ. ಜೊತೆಗೆ ಹರಳಿನ ನೆಕ್ಲೇಸ್ ನಿಮ್ಮ ಕೊರಳನ್ನು ಅಲಂಕರಿಸುವುದರಿಂದ ಸೌಂದರ್ಯಕ್ಕೆ ಇನ್ನಷ್ಟು ಒತ್ತು ಸಿಕ್ಕಂತಾಗುತ್ತದೆ. ಇದರೊಂದಿಗೆ ಝುಮ್ಕಾ, ಬಾಂಧನಿ ಕಿವಿಯೋಲೆಗಳನ್ನೂ ಧರಿಸಬಹುದು. ಈ ಕಿವಿಯೋಲೆಗಳು ಸೌಂದರ್ಯ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಬ್ಯಾಗ್

ಈ ಉಡುಪಿಗೆ ಕ್ಲಚ್ ಅಥವಾ ನೆಯ್ಗೆಯ ಬ್ಯಾಗ್ಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ. ಕೈಯಲ್ಲಿ ಹಿಡಿಯುವ ಅಥವಾ ಬಗಲಿಗೆ ನೇತು ಹಾಕಿಕೊಳ್ಳುವ ಬ್ಯಾಗ್ಗಳು ಸೂಕ್ತ.

ಬೈತಲೆ ಬೊಟ್ಟು

ಬೈತಲೆ ಬೊಟ್ಟು ಧರಿಸುವುದರಿಂದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಅದರಲ್ಲೂ ಬರೀ ಚಿನ್ನದ ಬೈತಲೆ ಬೊಟ್ಟು ಧರಿಸುವುದಕ್ಕಿಂತ ಹರಳಿನ ಅಥವಾ ವಿವಿಧ ಚಿತ್ತಾರವಿರುವ ಬೊಟ್ಟನ್ನು ಧರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.