ಹೀಲ್ಸ್ ಯಾರಿಗೆ ಸೂಕ್ತ? ಹೀಲ್ಸ್ ಹಾಕಿಕೊಳ್ಳುವುದರಿಂದ ಹೇಗೆಲ್ಲ ಕಾಣಿಸಬಹುದು? ಸದ್ಯಕ್ಕೆ ಟ್ರೆಂಡ್ನಲ್ಲಿರುವ ಹೀಲ್ಸ್ಗಳ ಬಗೆಗಿನ ಮಾಹಿತಿ ಇಲ್ಲಿದೆ:

ಸೌಂದರ್ಯವನ್ನು ಹೆಚ್ಚಿಸಿ, ಇನ್ನಷ್ಟು ಆಕರ್ಷಕವಾಗಿ ಕಾಣಲು ಸದಾ ಹಂಬಲಿಸುವ ಹೆಂಗಳೆಯರು ಒಂದಿಲ್ಲೊಂದು ನೂತನ ಫ್ಯಾಷನ್ ಮೊರೆ ಹೋಗುವುದು ಸಾಮಾನ್ಯ. ಅವುಗಳಲ್ಲಿ ಹೀಲ್ಸ್ಗಳೀಗ ಮುಂದಿವೆ.

ಹೀಲ್ಸ್ಗಳು ಆಧುನಿಕ ಫ್ಯಾಷನ್ನ ಭಾಗವೆಂದು ಭಾವಿಸಲಾಗಿದೆ. ಆದರೆ ಇವು ಪುರಾತನ ಕಾಲದಿಂದಲೂ ಬಳಕೆಯಲ್ಲಿದ್ದು, ಇದೀಗ ಇವುಗಳಲ್ಲಿ ಹೆಚ್ಚಿನ ವಿನ್ಯಾಸ ಹಾಗೂ ವಿಧಗಳನ್ನು ಕಂಡುಕೊಳ್ಳಲಾಗಿದೆ.

ಎತ್ತರ ಹಾಗೂ ಆಕರ್ಷಕವಾದ ನಿಲುವು ಪಡೆಯುವ ಮತ್ತು ಉಡುಗೆಗೆ ತಕ್ಕಂತೆ ಪಾದರಕ್ಷೆ ಧರಿಸುವ ಬಯಕೆಯಿಂದಾಗಿ ಹೈ ಹೀಲ್ಸ್ ಬಳಕೆ ಸಾಮಾನ್ಯ.

ಕಚೇರಿ, ಪಾರ್ಟಿ, ಶಾಪಿಂಗ್ ಹಾಗೂ ಇತರ ಯಾವುದೇ ಸಂದರ್ಭಗಳಲ್ಲಿ ಹೀಲ್ಸ್ಗಳನ್ನು ಧರಿಸಬಹುದು. ಆದರೆ ತಮ್ಮ ಪಾದದ ಆಕಾರ ಮತ್ತು ಎತ್ತರಕ್ಕೆ ತಕ್ಕಂತೆ ಅವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ತಪ್ಪಾದ ಆಯ್ಕೆ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಹೀಲ್ಸ್ ಎಷ್ಟು ಆಕರ್ಷಕ ಮತ್ತು ಸುಂದರವಾಗಿ ಕಾಣುವವೋ ಅವುಗಳನ್ನು ಧರಿಸಿ ದಿನವಿಡೀ ಹ್ಯಾಂಡಲ್ ಮಾಡುವುದೂ ಕೆಲವೊಮ್ಮೆ ಅಷ್ಟೇ ಪ್ರಯಾಸದಾಯಕವೂ ಹೌದು.

ಹೀಗಿದೆ ಹೈ ಹೀಲ್ಸ್ ಬಳಕೆಯ ಇತಿಹಾಸ

ಕ್ರಿ.ಪೂ 3500ರ ಸಮಯದಲ್ಲಿ ಈಜಿಪ್ಟ್ ನಾಗರಿಕೆತಯಲ್ಲಿ ಪುರುಷರು ಹೀಲ್ಸ್ ಬಳಸುತ್ತಿದ್ದರು ಎಂಬುದಕ್ಕೆ ಕುರುಹುಗಳಿವೆ.

9ನೇ ಶತಮಾನದಲ್ಲಿ ಪರ್ಶಿಯಾದಲ್ಲಿ ಮೊದಲಿಗೆ ಹೀಲ್ಸ್ ಬಳಕೆ ಆರಂಭವಾಗಿದ್ದು. ಹಾಗಂತ ಸ್ತ್ರೀಯರಲ್ಲ, ಬದಲಾಗಿ ಪುರುಷರು ಇವುಗಳನ್ನು ಧರಿಸುತ್ತಿದ್ದರು. ಅಶ್ವದಳ ಸೈನಿಕರು ತಮ್ಮ ಸುರಕ್ಷತೆಗೆ ‘ಗಲೇಶ್’ ಎಂಬ ಹೀಲ್ಡ್ ಶೂಗಳನ್ನು ಬಳಕೆಗೆ ತಂದದ್ದು. ತರುವಾಯ 17ನೇ ಶತಮಾನದಲ್ಲಿ ಯುರೋಪ್ನಾದ್ಯಂತ ಹೀಲ್ಸ್ ಬಳಕೆ ಸಾಮಾನ್ಯವಾಯಿತು. ಈ ಸಮಯದಲ್ಲಿ ಪುರುಷರು ಮತ್ತು ಸ್ತ್ರೀಯರಿಬ್ಬರೂ ಧರಿಸುತ್ತಿದ್ದರು.

18ನೇ ಶತಮಾನದ ಆದಿಯಾಗಿ ಹೀಲ್ಸ್ಗಳು ಮಹಿಳೆಯರ ಫ್ಯಾಷನ್ನ ಸಂಕೇತವಾಗಿ ಬದಲಾದವು. ಅಂದಿನಿಂದ ಈವರೆಗೆ ಮಹಿಳೆಯರಿಗಾಗಿ ತರಹೇವಾರಿ ಹೀಲ್ಸ್ಗಳ ವಿನ್ಯಾಸ ಹುಟ್ಟಿಕೊಂಡು, ಅವುಗಳ ಮಾರುಕಟ್ಟೆಯೂ ವಿಸ್ತರಿಸಿತು.

ಯಾರಿಗೆ ಸೂಕ್ತ ಹೀಲ್ಸ್

ವೈಯಕ್ತಿಕ ಆದ್ಯತೆ ಮತ್ತು ಸಂದರ್ಭಗಳನುಸಾರ ಹೀಲ್ಸ್ ಬಳಕೆ ಎಲ್ಲಾ ಸ್ತ್ರೀಯರಿಗೂ ಸೂಕ್ತವೇ. ಆದರೆ ಅವುಗಳ ಆಯ್ಕೆಯಲ್ಲಿ ಕೊಂಚ ಜಾಗೃತೆ ವಹಿಸಲೇಬೇಕು. 1.2 ರಿಂದ 1.4 ಇಂಚು ಎತ್ತರದ ಹೀಲ್ಸ್ ಬಳಕೆ ಉತ್ತಮ ಹಾಗೂ ಆರಾಮದಾಯಕವಾಗಿರುತ್ತದೆ. ನಿಮ್ಮ ಪಾದದ ಆಕಾರ, ಬೆರಳುಗಳ ಆರಾಮದಾಯಕತೆಯನ್ನು ಗಮನದಲ್ಲಿಟ್ಟುಕೊಂಡು ಹೀಲ್ಸ್ಗಳನ್ನು ಆಯ್ಕೆ ಮಾಡಿ.

* ಕಿಟನ್ ಹೀಲ್ಸ್ (1.5-2 ಇಂಚು) ದೈನಂದಿನ ಬಳಕೆಗೆ ಉತ್ತಮ ಹಾಗೂ ಸೀರೆ ಸೇರಿದಂತೆ ಎಲ್ಲ ಬಟ್ಟೆಗಳಿಗೂ ಸೂಕ್ತ. ನೀವು ಎತ್ತರವಾಗಿದ್ದರೆ ಹಾಗೂ ಎತ್ತರವಾಗಿ ಕಾಣುವ ಯೋಚನೆ ಇಲ್ಲದಿದ್ದರೆ ಈ ಹೀಲ್ಸ್ ಉತ್ತಮ.

* ಮಿಡ್-ಹೀಲ್ಸ್ (3- 4 ಇಂಚು) ಕಚೇರಿ ಅಥವಾ ಇತರ ಯಾವುದೇ ಕಾರ್ಯಕ್ರಮಗಳಿಗೆ ಇವುಗಳನ್ನು ಧರಿಸಬಹುದು. ನಿಮ್ಮ ಎತ್ತರ ಕಡಿಮೆ ಇದ್ದರೆ ಇವುಗಳನ್ನು ಧರಿಸಿ. ಆದರೆ ಜಾಗರೂಕರಾಗಿ ನಡೆಯುವ ಕೌಶಲವೂ ಇರಬೇಕಾಗುತ್ತದೆ.

* ಹೈಯರ್ ಹೀಲ್ಸ್ (4 ಇಂಚಿಗಿಂತ ಹೆಚ್ಚು) ವಿಶೇಷ ಸಂದರ್ಭಗಳಲ್ಲಿ ಬಳಸಬಹುದು. ಇವುಗಳನ್ನು ಧರಿಸಿ ಹೆಚ್ಚು ನಡೆಯುವುದು ಕಷ್ಟಕರ. ಹಾಗೆ ನಡೆಯಬೇಕಾದ ಅನಿವಾರ್ಯ ಇಲ್ಲದಿದ್ದರೆ ಹಾಗೂ ನಿಮಗೆ ಹೀಲ್ಸ್ ಧರಿಸುವ ಅಭ್ಯಾಸ ಇದ್ದರೆ ಉತ್ತಮ.

ಟ್ರೆಂಡಿಂಗ್ನಲ್ಲಿರುವ ಹೀಲ್ಸ್ಗಳಿವು

ಹೀಲ್ಸ್ಗಳ ವಿನ್ಯಾಸವೂ ಮಾರ್ಪಾಡಾಗುತ್ತಲೇ ಇದೆ. ಸ್ತ್ರೀಯರ ಅಭಿರುಚಿ, ಉಡುಗೆ ಹಾಗೂ ರೆಟ್ರೊ ಪ್ರಭಾವ ಸೇರಿದಂತೆ ಅನೇಕ ಅಂಶಗಳ ಆಧಾರದ ಮೇಲೆ ಹೊಸ ಹೀಲ್ಸ್ ಹುಟ್ಟಿಕೊಳ್ಳುತ್ತವೆ. ಸದ್ಯ ಟ್ರೆಂಡಿಂಗ್ನಲ್ಲಿರುವ ನೂರಾರು ನೂರಾರು ಶೈಲಿಯ ಹೀಲ್ಸ್ಗಳಲ್ಲಿ ಪ್ರಮುಖವಾದವುಗಳು ಇಂತಿವೆ.

ಫ್ಲಾರೆಡ್ ಹೀಲ್ಸ್, ಬ್ಲಾಕ್ ಹೀಲ್ಸ್, ಬೋಲ್ಡ್ ಆ್ಯಕ್ಸೆಂಟ್ಸ್, ಕ್ಲಿಯರ್ ಹೀಲ್ಸ್, ಬೇರ್ಫೂಟ್ ಶೂಸ್, ಕಿಟನ್ ಹೀಲ್ಸ್, ಫ್ಲ್ಯಾಟ್ಸ್ ಸೇರಿದಂತೆ ಹಲವಾರು ಬಗೆಯ ಹೀಲ್ಸ್ಗಳೀಗ ಟ್ರೆಂಡಿಂಗ್ನಲ್ಲಿವೆ.

ಪಾದಗಳಿಗೆ ಹೆಚ್ಚು ಆರಾಮಯದಾಯ, ನೂತನ ವಿನ್ಯಾಸವೇ ಇವುಗಳನ್ನೀಗ ಹೆಂಗಳೆಯರು ಹೆಚ್ಚು ಇಷ್ಟ ಪಟ್ಟು ಧರಿಸುತ್ತಿರಲು ಕಾರಣ.

ಸ್ನೇಕ್ಸ್ಕಿನ್ ಹೀಲ್ಸ್– ಹಾವಿನ ಚರ್ಮದ ಆಕಾರದ ವಿನ್ಯಾಸದಲ್ಲಿರುವ ಈ ಹೀಲ್ಸ್ಗಳು ಇದೀಗ ಟ್ರೆಂಡಿಂಗ್ನಲ್ಲಿವೆ. ಹಾವು, ಚಿರತೆ ಹಾಗೂ ಚೀತಾಗಳ ವಿಶಿಷ್ಟ ಮೈಬಣ್ಣ ಹಾಗೂ ಅದರ ಆಕಾರವನ್ನು ಆಧಾರವಾಗಿರಿಸಿ ಈ ಹೀಲ್ಸ್ಗಳನ್ನು ತಯಾರಿಸಲಾಗಿದೆ.

– ಅಭ್ಯಾಸ ಇಲ್ಲದೆ ಹೀಲ್ಸ್ ಧರಿಸುವುದರಿಂದ ಪಾದದ ಮೇಲೆ ಅಸ್ವಾಭಾವಿಕ ಒತ್ತಡ ಉಂಟಾಗುತ್ತದೆ. ಇದರಿಂದ ಹಿಮ್ಮಡಿ ನೋವು, ಕಾಲುನೋವು, ಬೆನ್ನುನೋವು ಹಾಗೂ ಸ್ನಾಯು ಸೆಳೆತವನ್ನು ಅನುಭವಿಸಬೇಕಾಗಬಹುದು. ಹೀಗಾಗಿ, ಹೀಲ್ಸ್ ಧರಿಸಿ ನಡೆಯುವಾಗ ಎಚ್ಚರ ವಹಿಸುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.