* ನನಗೆ ತುಂಬಾ ಆತಂಕ, ಉದ್ವೇಗ, ಕೀಳರಿಮೆ ಕಾಡುತ್ತಿದೆ. ಜೀವನವೇ ಬೇಡ ಎನಿಸುತ್ತಿದೆ. ಸಹಾಯ ಮಾಡಿ.

ಹೆಸರು, ಊರು ಇಲ್ಲ

ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಿದ್ದರೆ ಸಹಾಯವಾಗುತ್ತಿತ್ತು. ಪತ್ರವನ್ನು ನೋಡಿದರೆ ನಿಮ್ಮ ಬಗ್ಗೆ ಹೇಳಿಕೊಳ್ಳಲಾಗದಷ್ಟು ಹತಾಶೆ ಆವರಿಸಿಕೊಂಡಿರುವಂತೆ ಕಾಣುತ್ತದೆ. ಕಾಡುತ್ತಿರುವ ಉದ್ವೇಗ, ಆತಂಕಗಳೆಲ್ಲಾ ನಿಮ್ಮ ಕುರಿತು ನಿಮ್ಮ ಮನಸ್ಸಿನಲ್ಲಿರುವ ಬೇಸರವನ್ನು ಸೂಚಿಸುತ್ತದೆ. ಇದನ್ನು ನೀವು ಕೀಳರಿಮೆ ಎಂದು ಹೇಳುತ್ತಿರಬೇಕಲ್ಲವೇ? ಇಂತಹ ಪರಿಸ್ಥಿತಿಯಿಂದ ಹೊರಬರಲು ನಿಧಾನವಾಗಿ ಪ್ರಯತ್ನಿಸಬೇಕಾಗುತ್ತದೆ. ಮೂರು ವರ್ಷಗಳಾದ ಮೇಲೆ ‘ನಾನು ಹೇಗಿದ್ದರೆ ನನಗೇ ಖುಷಿಯಾಗುತ್ತದೆ’ ಎಂದು ಯೋಚಿಸಿ. ವಾಸ್ತವಕ್ಕೆ ಹತ್ತಿರವಾಗುವ ಕನಸುಗಳನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಇವತ್ತು ಏನು ಮಾಡಬೇಕು ಎಂದು ಪ್ರತಿದಿನ ಬೆಳಿಗ್ಗೆ ಯೋಚಿಸಿ ತಯಾರಾಗಿ. ಆರಂಭದಲ್ಲಿ ಸೋಲುಗಳು ಸಹಜ ಎಂದು ಒಪ್ಪಿಕೊಳ್ಳಿ. ಮನಸ್ಸಿನ ದುಗುಡವನ್ನು ಯಾವುದೇ ಸಲಹೆ, ಸಹಕಾರದ ನಿರೀಕ್ಷೆಯಿಲ್ಲದೆ ಸ್ನೇಹಿತರಲ್ಲಿ ಹಂಚಿಕೊಳ್ಳಿ. ಉದ್ವೇಗವನ್ನು ಹಿಡಿತಕ್ಕೆ ತಂದುಕೊಳ್ಳಲು ದೈಹಿಕ ವ್ಯಾಯಾಮವನ್ನು ನಿಯಮಿತವಾಗಿ ಮಾಡಿ. ನಿಮ್ಮ ಪರಿಸ್ಥಿತಿಯಲ್ಲಿ ಸ್ನೇಹಿತನೊಬ್ಬ ಇದ್ದಿದ್ದರೆ ಅವನಿಗೆ ಏನು ಸಲಹೆ ಕೊಡುತ್ತಿದ್ದಿರಿ? ಅದನ್ನು ನೀವೇ ಅನುಸರಿಸಿ.

* 28 ವರ್ಷದ ಸರ್ಕಾರಿ ನೌಕರ. 26 ವರ್ಷದ ಹುಡುಗಿಯನ್ನು 6 ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಅವಳಿಗೆ ಬಾಲ್ಯದಿಂದಲೇ ಮಧುಮೇಹವಿದೆ. ಇದರಿಂದ ಮುಂದೆ ತೊಂದರೆಯಾಗಬಹುದೆಂದು ಮನೆಯವರು ಒಪ್ಪುತ್ತಿಲ್ಲ. ಮನೆಯವರನ್ನು ಬಿಟ್ಟು ಮದುವೆಯಾದರೆ ಅವಳಿಗೆ ಖುಷಿಯಿರುವುದಿಲ್ಲ. ಇಬ್ಬರಿಗೂ ಪ್ರೀತಿಯನ್ನು ಮರೆಯಲಾಗುತ್ತಿಲ್ಲ. ಅವಳನ್ನು ಮದುವೆಯಾದರೆ ಮುಂದೆ ತೊಂದರೆಯಾಗುತ್ತದೆಯೇ?

ಹೆಸರು, ಊರು ಇಲ್ಲ

ಬಾಲ್ಯದಿಂದ ಬಂದಿರುವ ಮಧುಮೇಹ ಜೀವನಪರ್ಯಂತ ಇರುತ್ತದೆ. ಆದರೆ ಅದನ್ನು ಹಿಡಿತದಲ್ಲಿ ಇಡಬಹುದು. ಇದರಿಂದ ನಿಮ್ಮ ವೈವಾಹಿಕ ಜೀವನದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ವೈದ್ಯರನ್ನು ಭೇಟಿಯಾಗಿ ವಿವರವಾಗಿ ತಿಳಿದುಕೊಳ್ಳಿ. ನಿಮ್ಮಿಬ್ಬರ ಪ್ರೀತಿಯ ಪ್ರಾಮಾಣಿಕತೆ ಮೆಚ್ಚುವಂತಹದು. ಭವಿಷ್ಯದ ಅನಿಶ್ಚಿತತೆ ಆರೋಗ್ಯವಾಗಿರುವವರಿಗೂ ಇರುತ್ತದೆ. ಹಾಗಾಗಿ ಬಹಳ ದೂರದವರೆಗೆ ಚಿಂತಿಸದೆ ಮುಂದಿನ ಕೆಲವು ವರ್ಷಗಳ ಕುರಿತು ಮಾತ್ರ ಯೋಚಿಸಿ ತೀರ್ಮಾನವನ್ನು ತೆಗೆದುಕೊಳ್ಳಿ.

* 23 ವರ್ಷದ ಪದವೀಧರ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರಿ ಕೆಲಸ ಪಡೆದು ಜನರಿಗೆ ನೆರವಾಗುವ ಉದ್ದೇಶವಿದೆ. ಈಗಿನ ಕೆಲಸದಲ್ಲಿ ಆಸಕ್ತಿಯಿಲ್ಲ. ಕುಟುಂಬ ಆರ್ಥಿಕವಾಗಿ ನನ್ನನ್ನೇ ಅವಲಂಬಿಸಿರುವುದರಿಂದ ಕೆಲಸ ಬಿಡಲು ಆಗುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನೂ ಮಾಡಲಾಗುತ್ತಿಲ್ಲ. ಸಲಹೆ ನೀಡಿ.

ಹೆಸರು, ಊರು ಇಲ್ಲ

ಕೌಟುಂಬಿಕ ಪರಿಸ್ಥಿತಿಗಳಿಂದ ಅಸಹಾಯಕ ಭಾವನೆಯನ್ನು ಅನುಭವಿಸುತ್ತಾ ನಿಷ್ಕ್ರಿಯರಾಗಿ ಕುಳಿತಿದ್ದೀರಲ್ಲವೇ? ಅಸಹಾಯಕತೆ ನಿಮ್ಮ ಬುದ್ಧಿಯನ್ನು ಮಂಕಾಗಿಸಿದೆ. ಇರುವ ಮಿತಿಗಳಲ್ಲಿ ನಾನು ಬೆಳೆಯುವುದು, ಹೆಚ್ಚು ಗಳಿಸುವುದು ಹೇಗೆ? ಸದ್ಯದ ಕೆಲಸದಲ್ಲಿ ಹೆಚ್ಚು ಗಳಿಸುವುದು ಸಾಧ್ಯವೇ? ಓದುವುದಕ್ಕೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳುವುದು? ಒಂದೊಂದೇ ಮೆಟ್ಟಿಲನ್ನು ಏರುವುದು ಹೇಗೆ? ಎಲ್ಲವನ್ನೂ ಯೋಚಿಸಿ. ಅಸಹಾಯಕತೆ ಬುದ್ಧಿಗೆ ಹೊದಿಸಿರುವ ಪರದೆಯನ್ನು ಸರಿಸಿ ಪ್ರಪಂಚವನ್ನು ನೋಡಿ. ದಾರಿಗಳು ತಮ್ಮಿಂದ ತಾವೇ ತೆರೆದುಕೊಳ್ಳುತ್ತವೆ.

* 33 ವರ್ಷದ ಅತಿಥಿ ಉಪನ್ಯಾಸಕ. ಮನೆಯಲ್ಲಿ ಅಕ್ಕನ ಮಗಳ ಜೊತೆ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ನನಗೆ ಇಷ್ಟವಿಲ್ಲ. ಹೊರಗಡೆ ಮದುವೆಯಾಗುವುದು ಒಳ್ಳೆಯದು ಅನ್ನಿಸುತ್ತಿದೆ. ಸಲಹೆಕೊಡಿ.

ಹೆಸರು, ಊರು ತಿಳಿಸಿಲ್ಲ

ಅಕ್ಕನ ಮಗಳು ನಿಮಗಿಂತ ವಯಸ್ಸಿನಲ್ಲಿ ಬಹಳ ಚಿಕ್ಕವಳಾಗಿರುವ ಸಾಧ್ಯತೆಗಳಿವೆ. ಮೊದಲಿನಿಂದ ಅವಳನ್ನು ಸಂಗಾತಿಯ ದೃಷ್ಟಿಯಲ್ಲಿ ನೋಡದಿರುವುದಕ್ಕಾಗಿ ಈಗ ಹೆಂಡತಿಯಾಗಿ ಒಪ್ಪಿಕೊಳ್ಳುವುದು ಕಷ್ಟವಾಗುತ್ತಿರಬೇಕಲ್ಲವೇ? ಆದರೆ ನೀವು ಮನೆಯವರನ್ನು ಎದುರಿಸಲಾಗದೆ ಹಿಂಜರಿಕೆಯಲ್ಲಿರುವಂತೆ ಕಾಣಿಸುತ್ತಿದೆ. ಮನೆಯವರ ಉದ್ದೇಶ ಒಳ್ಳೆಯದೇ ಆಗಿರುತ್ತದೆ. ಆದರೆ ಇಷ್ಟವಿಲ್ಲದ ಮದುವೆಯನ್ನು ನೀವು ಈಗಲೇ ವಿರೋಧಿಸದಿದ್ದರೆ ನಿಮಗೆ, ಹುಡುಗಿಗೆ ಮತ್ತು ಹುಟ್ಟಲಿರುವ ಮಕ್ಕಳಿಗೂ ಕೂಡ ಅನ್ಯಾಯ ಮಾಡುತ್ತೀರಿ. ನಿಮ್ಮ ಕಷ್ಟ, ಹಿಂಜರಿಕೆಗಳನ್ನು ಅಕ್ಕನ ಮಗಳನ್ನೂ ಸೇರಿಸಿ ಎಲ್ಲರಲ್ಲಿಯೂ ಹಂಚಿಕೊಳ್ಳಿ. ಒತ್ತಾಯ, ಒತ್ತಡಗಳಿಗೆ ಮಣಿಯದೆ ನಿಮ್ಮ ಆಯ್ಕೆಯನ್ನು ಮಾಡಿಕೊಳ್ಳಿ. ತಾತ್ಕಾಲಿಕವಾಗಿ ಸಂಬಂಧಗಳು ಹಾಳಾಗುತ್ತಿರುವಂತೆ ಅನ್ನಿಸಿದರೂ ನಿಧಾನವಾಗಿ ಅವುಗಳನ್ನು ಸರಿಮಾಡಿಕೊಳ್ಳುವುದು ನಿಮಗೆ ಸಾಧ್ಯವಿದೆ.

* 13 ವರ್ಷದ ಹಿಂದೆ ವಿವಾಹವಾಗಿದೆ. 9 ವರ್ಷದ ಮಗಳಿದ್ದಾಳೆ. ಈಗ ಮೆದುಳಿನಲ್ಲಿ ಗಡ್ಡೆಯಾಗಿರುವ ಕಾರಣ ಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಜೀವನ ನಿರ್ವಹಣೆಗೆ ಹಣ ನೀಡುತ್ತಿಲ್ಲ. ಸಲಹೆ ಕೊಡಿ.

ಹೆಸರಿಲ್ಲ, ಬೆಂಗಳೂರು

ನಿಮ್ಮ ಪರಿಸ್ಥಿತಿ ಕಷ್ಟಕರವಾಗಿದೆ. ಇದಕ್ಕೆ ಪೊಲೀಸರ ಅಗತ್ಯವಿಲ್ಲ, ವಕೀಲರು ಸಹಾಯ ಮಾಡುತ್ತಾರೆ. ಪತಿ ನಿಮ್ಮ ಜೊತೆ ಬದುಕುತ್ತಿಲ್ಲವಾದ್ದರಿಂದ ಜೀವನ ನಿರ್ವಹಣೆಗೆ ಹಣ ಕೊಡಲೇಬೇಕು. ವಿಚ್ಛೇದನದ ಬಗೆಗೆ ತೀರ್ಪು ಬರುವವರೆಗೆ ಮಧ್ಯಂತರ ಪರಿಹಾರ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ವಕೀಲರ ಮೂಲಕ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ತಕ್ಷಣ ಪರಿಹಾರ ದೊರೆಯುತ್ತದೆ. ನ್ಯಾಯಾಧೀಶರ ಮುಂದೆ ಖುದ್ದಾಗಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಅವಕಾಶವಿರುತ್ತದೆ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.