ಕಾಲೇಜಿನಲ್ಲಿ 500 ವಿದ್ಯಾರ್ಥಿನಿಯರಿದ್ದಾರೆ. ಋತುಚಕ್ರದ ಸಮಯದಲ್ಲಿ ವಿದ್ಯಾರ್ಥಿನಿಯರ ಗೈರುಹಾಜರಿ ಜಾಸ್ತಿ ಇರುತ್ತಿತ್ತು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮನೆಗೆ ತೆರಳಿಬಿಡುತ್ತಿದ್ದರು. ಈಗ ಪಿಂಕ್ ರೂಮ್ ಶುರುವಾದಾಗಿನಿಂದ ಸ್ವಲ್ಪ ವಿಶ್ರಾಂತಿ ಪಡೆದು ಪುನಃ ತರಗತಿಗೆ ಬರುತ್ತಾರೆ ಇದರಿಂದ ಹೆಣ್ಣುಮಕ್ಕಳ ಅಧ್ಯಯನದ ಪ್ರಗತಿಗೆ ತುಂಬಾ ಸಹಾಯವಾಗಿದೆ.
– ಸುಮಾ ಆರ್., ‘ತಂಗಿಮನೆ’ಯ ಉಸ್ತುವಾರಿ ವಹಿಸಿಕೊಂಡಿರುವ ಅಧ್ಯಾಪಕಿ ಸರ್ಕಾರಿ ಎಸ್ಎಸ್ಇಎ ಪದವಿ ಪೂರ್ವ ಕಾಲೇಜು ಗೌರಿಬಿದನೂರು
ಪಿಂಕ್ ರೂಮ್ ಶುರುವಾದಾಗಿನಿಂದ ಅದರ ಬಳಕೆ ಸರಿಯಾಗಿ ಆಗುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ವಿದ್ಯಾರ್ಥಿನಿ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಬೇಕಾದ ವ್ಯವಸ್ಥೆ ಮಾಡಿಕೊಟ್ಟ ನೀಡುವ ಹೃದಯ ಫೌಂಡೇಶನ್ ಸಹಯೋಗಕ್ಕೆ ನಾನು ಆಭಾರಿ.
– ಶ್ರೀನಿವಾಸ್ ಜಿ.ವಿ. ಪ್ರಾಚಾರ್ಯ ಸರ್ಕಾರಿ ಎಸ್ಎಸ್ಇಎ ಪದವಿ ಪೂರ್ವ ಕಾಲೇಜು ಗೌರಿಬಿದನೂರು