ಸಾಧಕಿಯರ ಪ್ರಶಸ್ತಿಗೆ ಸಮಿತಿಯ ಮುಂದೆ 30 ಶಿಫಾರಸುಗಳು ಬಂದಿದ್ದವು. ಸಾಧನೆ ತೋರಿದ ಮಹಿಳೆಯ ಹಿನ್ನೆಲೆ, ಪರಿಸ್ಥಿತಿ, ಕಾರ್ಯದ ಸಾಧಕ–ಬಾಧಕ ಗಮನಿಸಿ ಅಂಕಗಳನ್ನು ನೀಡಿದೆವು
ರತ್ನಕಲಾ, ನಿವೃತ್ತ ನ್ಯಾಯಮೂರ್ತಿ
ನೈಜ ಸಾಧಕರನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಆರ್ಥಿಕ, ಸಾಮಾಜಿಕ ಸ್ತರಗಳನ್ನು ಗಮನಿಸಿ ಆಯ್ಕೆಗೆ ಮಾನದಂಡ ರೂಪಿಸಿದೆವು. ಬದುಕಿನಲ್ಲಿ ಕಷ್ಟಪಟ್ಟು ಮೇಲೆ ಬಂದು ಸಾಧನೆ ತೋರಿದವರಿಗೆ ಆದ್ಯತೆ ಸಿಕ್ಕಿದೆ.
ಧರಣಿದೇವಿ ಮಾಲಗತ್ತಿ, ಐಪಿಎಸ್ ಅಧಿಕಾರಿ
ಜನಪ್ರಿಯತೆ ಗಳಿಸಿದವರಿಗೆ ಮಾತ್ರವೇ ಗೌರವ, ಸನ್ಮಾನ ಸಿಗುತ್ತದೆ. ಎಲೆಮರೆಯ ಕಾಯಿಗಳನ್ನು ಗುರುತಿಸುವ ಅವಕಾಶ ಸಿಕ್ಕಿದ್ದಕ್ಕೆ ‘ಪ್ರಜಾವಾಣಿ’ಗೆ ಆಭಾರಿಯಾಗಿದ್ದೇನೆ. ಎಲ್ಲ ಕ್ಷೇತ್ರ, ಸ್ಥಳಗಳನ್ನು ಆಧರಿಸಿ ಸಾಧಕಿಯರನ್ನು ಆಯ್ಕೆ ಮಾಡಿದ್ದೇವೆ