ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಧದೆಣ್ಣೆಯಲ್ಲಿದೆ ಸೌಂದರ್ಯದ ಗುಟ್ಟು

Last Updated 4 ಆಗಸ್ಟ್ 2020, 5:00 IST
ಅಕ್ಷರ ಗಾತ್ರ

ವಯಸ್ಸಾದಂತೆ ಚರ್ಮದಲ್ಲಿ ನೆರಿಗೆ ಮೂಡುವುದು, ಸುಕ್ಕುಗಟ್ಟುವುದು ಸಾಮಾನ್ಯ. 40ರ ನಂತರಚರ್ಮದ ಅಂದ ಕೆಡುವುದರಿಂದಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಚರ್ಮ ಮೊದಲಿನಂತಾಗಬೇಕು ಎಂಬ ಕಾರಣಕ್ಕೆ ಅನೇಕ ರಾಸಾಯನಿಕ ಉತ್ಪನ್ನಗಳ ಮೊರೆ ಹೋಗುತ್ತಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಯಾಕೆಂದರೆ ಮಾಲಿನ್ಯ, ಅನಾರೋಗ್ಯಕರ ಜೀವನಶೈಲಿ, ಚರ್ಮದ ಸುರಕ್ಷತೆಯ ಕ್ರಮಗಳನ್ನು ಪಾಲಿಸದೇ ಇರುವುದರಿಂದ ವಯಸ್ಸಾದ ಮೇಲೆ ಚರ್ಮದ ಸುಕ್ಕುಗಟ್ಟುವಿಕೆ, ನೆರಿಗೆ ಮೂಡುವುದು ಮುಂತಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚರ್ಮದ ಆರೋಗ್ಯದ ದೃಷ್ಟಿಯಿಂದ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳ ಮೊರೆ ಹೋಗುವುದಕ್ಕಿಂತನೈಸರ್ಗಿಕ ವಿಧಾನಗಳಿಂದ ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಗಂಧದೆಣ್ಣೆ, ಗುಲಾಬಿ ಎಣ್ಣೆಯಂತಹ ತೈಲಗಳಿಂದ ಚರ್ಮದ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು. ಅಲ್ಲದೇ ಅಡ್ಡ ಪರಿಣಾಮಗಳು ಕಡಿಮೆ.

ಗುಲಾಬಿ ಎಣ್ಣೆ

ಚರ್ಮದ ಆರೋಗ್ಯದಲ್ಲಿ ಗುಲಾಬಿ ಎಣ್ಣೆಯ ಪರಿಣಾಮ ಬಹಳ ದೊಡ್ಡದು. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಹಾಗೂ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಅಧಿಕವಾಗಿವೆ. ಇದು ಚರ್ಮಕ್ಕೆ ಯಾವುದೇ ರೀತಿಯ ಸೋಂಕು ತಗುಲದಂತೆ ಕಾಪಾಡುತ್ತದೆ. ಚರ್ಮದ ಆಳದಿಂದಲೇ ರಕ್ಷಣೆ ನೀಡುತ್ತದೆ. ಜೊತೆಗೆ ವಯಸ್ಸಾದ ಲಕ್ಷಣಗಳು ಚರ್ಮದ ಮೇಲೆ ಕಾಣಿಸದಂತೆ ತಡೆಯುತ್ತದೆ.

ಗಂಧದ ಎಣ್ಣೆ

ಸಾರಭೂತ ಎಣ್ಣೆಯಾದ ಗಂಧದೆಣ್ಣೆಯಿಂದ ಚರ್ಮಕ್ಕೆ ಅನೇಕ ಉಪಯೋಗಗಳಿವೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣ ಅಧಿಕವಿದ್ದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೇ ಗಂಧದೆಣ್ಣೆ ಚರ್ಮದ ನರಗಳನ್ನು ಪುನಶ್ಚೇತನಗೊಳಿಸುತ್ತದೆ. ಕಪ್ಪುಕಲೆಗಳನ್ನು ನಿವಾರಿಸುತ್ತದೆ. ಇಸುಬು ಹಾಗೂ ಸೋರಿಯಾಸಿಸ್‌ನಂತಹ ಕಾಯಿಲೆಗಳು ಬರದಂತೆ ತಡೆಯುತ್ತದೆ.

ಸಾಂಬ್ರಾಣಿ ಎಣ್ಣೆ

ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದರಲ್ಲಿ ರೋಗ ನಿರೋಧಕ ಗುಣವು ಅಧಿಕವಿದ್ದು, ಅನೇಕ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಜೊತೆಗೆ ಅಂಗಾಂಶಗಳ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಚರ್ಮದ ಮೇಲೆ ಗಾಯದ ಗುರುತು ಅಥವಾ ಕಲೆಗಳಿದ್ದರೆ ಈ ಎಣ್ಣೆಯ ಬಳಕೆಯಿಂದ ಸುಲಭವಾಗಿ ಅಳಿಸಿ ಹಾಕಬಹುದು. ಮುಖದ ಮೇಲಿನ ಸುಕ್ಕು ತಡೆಗಟ್ಟಲು ಕೂಡ ಇದು ಸಹಕಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT