ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅವರಿಗೆ ಆಡಲು ವಿವಿಧ ಬಣ್ಣದ ವೈವಿಧ್ಯಮಯ ಆಟಿಕೆಗಳನ್ನು ಹೆತ್ತವರು ಕೊಡಿಸುತ್ತಿರುತ್ತಾರೆ; ನೆಂಟರಿಷ್ಟರು ಕೂಡ ಉಡುಗೊರೆಯಾಗಿ ನೀಡುತ್ತಿರುತ್ತಾರೆ.

ಮಕ್ಕಳಿಗೆ ಆಟಿಕೆಗಳು ಇಷ್ಟವಾಗುವುದು ಸಹಜ. ಆಟಿಕೆಗಳು ಮಕ್ಕಳ ಬೆಳವಣಿಗೆಗೆ ಪೂರಕ. ಆದರೆ ಅವುಗಳ ಆಯ್ಕೆ ಸರಿ ಇಲ್ಲದಿದ್ದರೆ ಅವೇ ಮಕ್ಕಳಿಗೆ ಮಾರಕವೂ ಆಗಬಹುದು.

ಹೀಗಾಗಿ ಆಟಿಕೆಗಳನ್ನು ಖರೀದಿಸುವಾಗ ಈ ಅಂಶಗಳನ್ನು ಗಮನದಲ್ಲಿಡಿ:

* ಮಗುವಿನ ಪ್ರಾಯಕ್ಕೆ ತಕ್ಕ ಆಟಿಕೆ ಖರೀದಿಸಿ.

* ‘Non Toxic’ ಎಂಬ ಬರಹವಿರುವ ಆಟಿಕೆಗಳನ್ನೇ ಆಯ್ದುಕೊಳ್ಳಿ.

* ಅತ್ಯಂತ ಮೃದು ಬಣ್ಣಗಳ, ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಿದ, ಮನೋವೈಜ್ಞಾನಿಕ ನೆಲೆಗಟ್ಟಲ್ಲಿ ತಯಾರಾದ ಆಟಿಕೆಗಳನ್ನು ಖರೀದಿಸಿ.

* ಬಟ್ಟೆಯಿಂದ ಮಾಡಿದ ಆಟಿಕೆಗಳನ್ನು ಕೊಳ್ಳುವಾಗ ಅದರಲ್ಲಿ ‘ಬೆಂಕಿ ನಿರೋಧಕ’ ಎಂಬ ಲೇಬಲ್ ಇದೆಯೇ ನೋಡಿ.

* ಟೆಡ್ಡಿಬೇರ್‌ನಂತಹ ಸ್ಟಫ್ಡ್ ಟಾಯ್ಸ್ ತೊಳೆಯಬಹುದಾದುದ್ದೇ ಎಂದು ಲೇಬಲ್ ಪರೀಕ್ಷಿಸಿ.

* ತೀರಾ ಸಣ್ಣ ಮಕ್ಕಳಿಗೆ ನೀಡುವ ಆಟಿಕೆಗಳು ಕನಿಷ್ಠ ಮೂರು ಸೆಂಟಿಮೀಟರ್ ಅಗಲ, ಆರು ಸೆಂಟಿಮೀಟರ್ ಉದ್ದ ಹೊಂದಿರಬೇಕು. ಹೀಗಿದ್ದರೆ ಅಕಸ್ಮಾತ್ ಮಗು ಆಟಿಕೆ ಬಾಯಿಗೆ ಹಾಕಿದರೂ ಗಂಟಲಿಗೆ ಸಿಕ್ಕಿ ಉಸಿರುಗಟ್ಟುವ ಸಾಧ್ಯತೆ ಕಡಿಮೆ.

* ಗೋಲಿಗಳು, ನಾಣ್ಯಗಳು, ಸಣ್ಣ ಬಟನ್ ಅಥವಾ ಆ ಮಾದರಿಯ ಸಣ್ಣ ವಸ್ತುಗಳನ್ನು ಮಗುವಿಗೆ ಆಡಲು ಕೊಡಬಾರದು.

* ಬ್ಯಾಟರಿ ಚಾಲಿತ ಆಟಿಕೆಗಳ ಬ್ಯಾಟರಿ ಕೇಸ್ ಸ್ಕ್ರೂ ಸಹಿತ ಮುಚ್ಚಳದಿಂದ ಭದ್ರಪಡಿಸಿರಬೇಕು. ಮಗುವಿನ ಕೈಗೆ ಆ ಬ್ಯಾಟರಿಗಳು ಸಿಕ್ಕಿ ಅವರು ಅದನ್ನು ಜಗಿದರೆ ಅಥವಾ ನುಂಗಿದರೆ ಅಪಾಯ.

* ಜಗಿದರೆ, ಕಚ್ಚಿದರೆ, ಕೆಳಗೆ ಬಿದ್ದರೆ ತುಂಡಾಗದ ಹಾಗೂ ಪುಡಿಯಾಗದ ಆಟಿಕೆಗಳನ್ನು ಖರೀದಿಸಿ.

* ಆಟಿಕೆಗಳಲ್ಲಿ ಚೂಪು ಅಥವಾ ಮೊನಚು ಭಾಗಗಳಿಲ್ಲದಂತೆ ಗಮನ ವಹಿಸಿ.

* ಆಟಿಕೆಗಳಲ್ಲಿ ಕೊಳೆಯಾಗಿದ್ದರೆ ಕಾಲಕಾಲಕ್ಕೆ ಸ್ವಚ್ಛಗೊಳಿಸಿ.

* ಮುರಿದ, ಒಡೆದು ಗೀರು ಬಿದ್ದ ಆಟಿಕೆಗಳನ್ನು ಆಡಲು ಕೊಡಬೇಡಿ.

* ಆಟಿಕೆಗಳು ಹೊರಡಿಸುವ ಶಬ್ದ ಮೆಲುದನಿಯದ್ದಾಗಿರಲಿ. ಇಲ್ಲದಿದ್ದರೆ ಮಗುವಿನ ಕಿವಿಗೆ ಹಾನಿಯಾಗುತ್ತದೆ; ಅದಕ್ಕೆ ಕಿರಿಕಿರಿಯೂ ಆಗುತ್ತದೆ.

* ಮೂರು ವರ್ಷದ ನಂತರದ ಮಕ್ಕಳಿಗೆ ಬಿಲ್ಡಿಂಗ್ ಬ್ಲಾಕ್ಸ್ ಕೊಡಿಸುವುದರಿಂದ ಅವರ ಕಲ್ಪನಾಶಕ್ತಿ ವಿಕಾಸವಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ.

* ಮಕ್ಕಳಲ್ಲಿ ದ್ವೇಷ ಭಾವನೆ ತುಂಬುವ ಗನ್, ಪಿಸ್ತೂಲ್ ರೀತಿಯ ಆಟಿಕೆಗಳನ್ನು ಕೊಡಬೇಡಿ.

* ವಿವಿಧ ಗಾತ್ರದ ಚೆಂಡು ಎಲ್ಲ ಪ್ರಾಯದ ಮಕ್ಕಳಿಗೂ ಪ್ರಿಯವಾದ ಆಟಿಕೆ.

* ಸ್ವಲ್ಪ ದೊಡ್ಡ ಮಕ್ಕಳಿಗೆ ಲೂಡೋ, ಹಾವು ಮತ್ತು ಏಣಿ, ಚೆಸ್, ಕೇರಂ – ಹೀಗೆ ಒಳಾಂಗಣ ಆಟದ ವಸ್ತುಗಳನ್ನು ಒದಗಿಸಿ.

* ದೊಡ್ಡ ಮಕ್ಕಳಿಗೆ ಹೊರಗೆ ಆಡಲು ಬ್ಯಾಟ್, ಬಾಲ್, ಬ್ಯಾಡ್ಮಿಂಟನ್ ರಾಕೆಟ್ ಕೊಡಿಸಿ.

* ಸಣ್ಣ ಮಕ್ಕಳಿಗೆ ಟ್ರೈಸೈಕಲ್, ದೊಡ್ಡ ಮಕ್ಕಳಿಗೆ ಸೈಕಲ್ ಕೊಡಿಸಿ. ಅದನ್ನವರು ತುಂಬಾ ಇಷ್ಟಪಟ್ಟು ಅನುಭವಿಸುತ್ತಾರೆ.

* ಸಣ್ಣ ಮಕ್ಕಳಿಗೆ ಸ್ಕೂಟರ್, ಕಾರ್ ಇತ್ಯಾದಿ ಮಾದರಿಯ ಕುಳಿತು ಸೈಕಲಿನಂತೆ ಓಡಿಸಬಹುದಾದ ಆಟಿಕೆ ಸಿಗುತ್ತದೆ.

* ನೈಸರ್ಗಿಕ ಬಣ್ಣಗಳನ್ನು ಹಚ್ಚಿದ ಮರದ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವು ಅತ್ಯಂತ ಸುರಕ್ಷಿತವೂ ಚಂದವೂ ಆಗಿರುತ್ತವೆ.

* ಹೆಣ್ಣುಮಕ್ಕಳಿಗೆ ಗೊಂಬೆಗಳು, ಟೆಡ್ಡಿಬೇರ್‌ನಂತಹ ಆಟಿಕೆಗಳು ಇಷ್ಟ.

* ಗಂಡುಮಕ್ಕಳಿಗೆ ರೂಪದಲ್ಲಿರುವ ಆಟಿಕೆಗಳು ಇಷ್ಟ.

* ಮೂರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತಮ್ಮ ಆಟದ ಬಳಿಕ ಆಟಿಕೆಗಳನ್ನು ಜಾಗೃತೆಯಿಂದ ನಿರ್ದಿಷ್ಟ ಜಾಗದಲ್ಲಿ ಎತ್ತಿಡಲು ಅಭ್ಯಾಸ ಮಾಡಿಸಿ. ಇದರಿಂದ ಮನೆ ಅಸ್ತವ್ಯಸ್ತವಾಗಿರುವುದನ್ನು ತಪ್ಪಿಸಬಹುದು. ಮಕ್ಕಳು ಅಚ್ಚುಕಟ್ಟುತನವನ್ನೂ ಕಲಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.