ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಗಣಿಯಲ್ಲಿ ಸ್ಫೋಟ: ಒಳಗೆ ಸಿಲುಕಿದ್ದ 22 ಕಾರ್ಮಿಕರಲ್ಲಿ 12 ಮಂದಿ ಜೀವಂತ

10 ಕಾರ್ಮಿಕರ ಸ್ಥಿತಿ ತಿಳಿದಿಲ್ಲ: ಕ್ಸಿನ್ಹುವಾ ವರದಿ
Last Updated 18 ಜನವರಿ 2021, 7:39 IST
ಅಕ್ಷರ ಗಾತ್ರ

ಬೀಜಿಂಗ್‌: ಈಶಾನ್ಯ ಚೀನಾದ ಚಿನ್ನದ ಗಣಿಯಲ್ಲಿ ಕಳೆದ ವಾರ ಸಂಭವಿಸಿದ ಸ್ಫೋಟದಿಂದಾಗಿ ಗಣಿಯೊಳಗೆ ಸಿಲುಕಿದ್ದ 22 ಕಾರ್ಮಿಕರಲ್ಲಿ 12 ಮಂದಿ ಜೀವಂತವಾಗಿದ್ದಾರೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪರಿಹಾರ ಕಾರ್ಯದಲ್ಲಿ ತೊಡಗಿರುವ ರಕ್ಷಣಾ ತಂಡದವರು ಗಣಿಯಲ್ಲಿ ಸಿಲುಕಿ ಜೀವಂತವಾಗಿರುವವರನ್ನು ಸುರಕ್ಷಿತವಾಗಿ ಹೊರ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸೋಮವಾರ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾನುವಾರ ರಾತ್ರಿ ಗಣಿಯೊಳಗೆ ರಕ್ಷಣಾ ಕಾರ್ಯಾಚರಣೆ ನಡೆಸಲು ತೆಗೆದಿದ್ದ ಸುರಂಗದಿಂದ (ಶಾಫ್ಟ್‌) ಬಂದ ಟಿಪ್ಪಣಿ ಪ್ರಕಾರ, ಗಣಿಯೊಳಗೆ ಸಿಲುಕಿರುವ ಉಳಿದ ಹತ್ತು ಮಂದಿ ಸ್ಥಿತಿ ಹೇಗಿದೆ ಎಂದು ತಿಳಿದಿಲ್ಲ ಎಂದು ಕ್ಸಿನ್ಹುವಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟಿಪ್ಪಣಿಯಲ್ಲಿ ಉಲ್ಲೇಖಿಸಿರುವಂತೆ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಶುದ್ಧ ಗಾಳಿಯ ಕೊರತೆ ನೀರಿನ ಒಳ ಹರಿವು ಹೆಚ್ಚಿದ ಕಾರಣ ಗಣಿಯೊಳಗೆ ಪರಿಸ್ಥಿತಿ ಮತ್ತೂ ಹದಗೆಡುತ್ತಿದೆ ಎಂದು ಹೇಳಲಾಗಿದೆ.

ಈಶಾನ್ಯ ಚೀನಾದ ಪೂರ್ವ ಶಾಂಡೊಂಗ್ ಪ್ರಾಂತ್ಯದ ಯಾಂತಾಯಿ ನಗರ ವ್ಯಾಪ್ತಿಯಲ್ಲಿರುವ ಕ್ವಿಕ್ಸಿಯಾ ಚಿನ್ನದ ಗಣಿಯಲ್ಲಿ ಜ.10ರಂದು ಮಧ್ಯಾಹ್ನ ಸ್ಫೋಟ ಸಂಭವಿಸಿತ್ತು. ಗಣಿಯೊಳಗೆ 22 ಕಾರ್ಮಿಕರು ಸಿಲುಕಿಕೊಂಡಿದ್ದರು. ಪರಿಹಾರ ಕಾರ್ಯಕ್ಕಾಗಿ ರಕ್ಷಣಾ ತಂಡವನ್ನು ಅಧಿಕಾರಿಗಳು ರವಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT