ಮಂಗಳವಾರ, ಏಪ್ರಿಲ್ 13, 2021
25 °C

ಇಂಡೊನೇಷ್ಯಾದಲ್ಲಿ ಹಡುಗು-ದೋಣಿ ಡಿಕ್ಕಿ: 17 ಮಂದಿ ನಾಪತ್ತೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಜಕಾರ್ತಾ: ‘ಇಂಡೊನೇಷ್ಯಾದ ಜಾವಾ ದ್ವೀಪದಲ್ಲಿ ಸರಕು ಸಾಗಣೆ ಹಡಗು ಮತ್ತು ಮೀನುಗಾರಿಕೆ ದೋಣಿಯ ನಡುವೆ ಡಿಕ್ಕಿ ಸಂಭವಿಸಿದ್ದು,17 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

‘ಇಂದ್ರಮಾಯು ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಇಂಡೊನೇಷ್ಯಾದ ಎಂವಿ ಹ್ಯಾಬ್ಕೊ ಪಯೋನೀರ್ ಸರಕು ಸಾಗಣೆ ಹಡಗಿಗೆ ಮೀನುಗಾರಿಕೆ ದೋಣಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ದೋಣಿಯು ನೀರಿನಲ್ಲಿ ಮುಳುಗಿದೆ. ಈ ದೋಣಿಯಲ್ಲಿ 32 ಮಂದಿ ಇದ್ದರು’  ಎಂದು ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡೆಡೇನ್‌ ರಿದ್ವಾನ್ಶು ತಿಳಿಸಿದರು.

‘ದೋಣಿಯಲ್ಲಿ ಸಿಲುಕಿದ್ದ 15 ಜನರನ್ನು ರಕ್ಷಿಸುವಲ್ಲಿ ಸ್ದಳೀಯ ಮೀನುಗಾರರು ಮತ್ತು ನೌಕಾಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇತರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಸಮುದ್ರ ಸಾರಿಗೆ ನಿರ್ದೇಶನಾಲಯದ ವಕ್ತಾರ ವಿಷ್ಣುವರ್ಧನ ಅವರು ಮಾಹಿತಿ ನೀಡಿದರು.

‘ಬೊರ್ನಿಯೊ ದ್ವೀಪದಿಂದ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಸರಕು ಸಾಗಣೆ ಹಡಗು, ಮೀನುಗಾರರ ಬಲೆಗೆ ಸಿಲುಕಿತ್ತು. ಇದರಿಂದ ಹೊರ ಬರಲು ಪ್ರಯತ್ನಿಸುವಾಗ ಈ ಅಪಘಾತ ಸಂಭವಿಸಿದೆ’ ಎಂದು  ರಿದ್ವಾನ್ಶು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು