ಮಂಗಳವಾರ, ಡಿಸೆಂಬರ್ 1, 2020
20 °C

ಕೋವಿಡ್ ವೃದ್ಧಿಗೆ ಟ್ರಂಪ್ ರ‍್ಯಾಲಿಗಳು ಕಾರಣ: ಸಮೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡ ಸುಮಾರು 18 ಚುನಾವಣಾ ರ‍್ಯಾಲಿಗಳಿಂದಾಗಿ ಸುಮಾರು 30,000 ಕೋವಿಡ್ ಪ್ರಕರಣಗಳು, 700 ಸಾವುಗಳು ಸಂಭವಿಸಿವೆ ಎಂದು ಸಮೀಕ್ಷೆಯೊಂದು ಅಂದಾಜು ಮಾಡಿದೆ.

ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಗೊತ್ತಾಗಿದೆ. ಟ್ರಂಪ್ ರ‍್ಯಾಲಿ ನಡೆಸಿದ ಪ್ರದೇಶಗಳಲ್ಲಿ ಅತ್ಯಧಿಕ ಸೋಂಕು ಪ್ರಕರಣಗಳು, ಸಾವುಗಳು ವರದಿಯಾಗಿವೆ ಎಂದು ಅದು ಹೇಳಿದೆ.

‘ಕೋವಿಡ್ ಏರುವಲ್ಲಿ ಬೃಹತ್ ಸಭೆಗಳ ಪರಿಣಾಮ’ ಕುರಿತಂತೆ ಸಮೀಕ್ಷೆ ನಡೆದಿದ್ದು, ಜೂನ್‌ 20ರಿಂದ ಸೆಪ್ಟೆಂಬರ್ 22ರವರೆಗೆ ಟ್ರಂಪ್ ರ‍್ಯಾಲಿ ನಡೆದಿದ್ದ ವಿವಿಧ ಕಡೆಗಳಲ್ಲಿನ ಪ್ರಕರಣಗಳನ್ನು ಉಲ್ಲೇಖಿಸಿದೆ.

ಕೋವಿಡ್–19 ಬೃಹತ್ ಸಭೆಗಳಿಂದ ಸಮುದಾಯಕ್ಕೆ ಹರಡಲಿದೆ ಎಂಬ ಆರೋಗ್ಯ ಇಲಾಖೆ ಅಧಿಕಾರಿಗಳ ಆತಂಕವನ್ನು ನಮ್ಮ ಸಮೀಕ್ಷೆಯ ಅಂಕಿ ಅಂಶಗಳು ದೃಢಪಡಿಸುತ್ತವೆ. ಮುಖ್ಯವಾಗಿ ಅಂತರ ಕಾಪಾಡುವಿಕೆ, ಮಾಸ್ಕ್ ಧರಿಸುವ ಮನೋಭಾವ ಬಹುತೇಕ ಕಡಿಮೆ ಇತ್ತು. ಇದಕ್ಕಾಗಿ ಟ್ರಂಪ್ ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದ ಸಮುದಾಯ ದೊಡ್ಡ ಬೆಲೆ ತೆತ್ತಿದೆ ಎಂದಿದೆ.

ಸಮೀಕ್ಷೆ ಕುರಿತ ಟ್ವಿಟರ್ ಪೋಸ್ಟಗೆ ಪ್ರತಿಕ್ರಿಯಿಸಿದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬೈಡನ್, ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿಮ್ಮ ಬಗ್ಗೆ ಕಾಳಜಿ ಇಲ್ಲ. ತಮ್ಮ ಬೆಂಬಲಿಗರ ಬಗ್ಗೆಯೂ ಕಾಳಜಿ ಅವರಿಗಿರಲಿಲ್ಲ’ ಎಂದಿದ್ದಾರೆ.

ಸಮೀಕ್ಷೆ ವಿವರಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟಾರೆ ಸುಮಾರು 87 ಲಕ್ಷ ಅಮೆರಿಕನ್ನರಿಗೆ ಸೋಂಕು ತಗುಲಿದ್ದು, ಸುಮಾರು 2.25 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು