ಬುಧವಾರ, ಮಾರ್ಚ್ 29, 2023
32 °C

ಮೆಕ್ಸಿಕೊ: ಸರಣಿ ಅಪಘಾತ, 19 ಸಾವು

ಎ.ಪಿ Updated:

ಅಕ್ಷರ ಗಾತ್ರ : | |

Prajavani

ಮೆಕ್ಸಿಕೊ (ಎಪಿ): ಮಧ್ಯ ಮೆಕ್ಸಿಕೊದ ಹೆದ್ದಾರಿಯಲ್ಲಿ ಶನಿವಾರ ಟ್ರಕ್‌ವೊಂದು ಒಂದು ಟೋಲ್‌ ಬೂತ್‌ ಮತ್ತು ಇತರ ಆರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಕನಿಷ್ಠ 19 ಮಂದಿ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಟ್ರಕ್‌ನ ಬ್ರೇಕ್‌ ವೈಫಲ್ಯದಿಂದ ಮೊದಲು ಬೂತ್‌ಗೆ ಬಳಿಕ ಅಲ್ಲಿದ್ದ ಇತರೆ ವಾಹನಗಳಿಗೂ ಅಪ್ಪಳಿಸಿದೆ. ಮೆಕ್ಸಿಕೊ ನಗರವನ್ನು ಪ್ಯೂಬ್ಲಾ ರಾಜ್ಯದ ಜೊತೆಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಅಪಘಾತದ ಬಳಿಕ ಬೆಂಕಿ ಹೊತ್ತಿಕೊಂಡಿದೆ.

ಅಪಘಾತದಲ್ಲಿ ಸಾವನ್ನಪ್ಪಿದವರ ಪ್ರಮಾಣ ಶನಿವಾರ ರಾತ್ರಿ ಹೊತ್ತಿಗೆ 19 ತಲುಪಿದೆ ಎಂದು ಮೆಕ್ಸಿಕೊದ ಸಂಯುಕ್ತ ರಸ್ತೆಗಳು ಮತ್ತು ಸೇತುವೆಗಳಿಗೆ ಸಂಬಂಧಿಸಿದ ಸೇವಾ ಸಂಸ್ಥೆ ಹೇಳಿಕೆಯೊಂದರಲ್ಲಿ ತಿಳಿಸಿದೆ. 

ಅಪಘಾತ ಸಂಭವಿಸಿದ ಟೋಲ್‌ ಬೂತ್‌ ಬಳಿ ಕೆಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಇತರ ವಾಹನಗಳು ಸಂಪೂರ್ಣ ಹಾನಿಗೊಂಡಿದ್ದು, ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು