ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ| ಈ ಬಾರಿಯದ್ದು ಅತಿ ದುಬಾರಿ ಚುನಾವಣೆ : ಸಮೀಕ್ಷೆ

ಸೆಂಟರ್‌ ಫಾರ್‌ ರೆಸ್ಪಾನ್ಸಿವ್‌ ಪಾಲಿಟಿಕ್ಸ್‌ ಸಮೀಕ್ಷೆ
Last Updated 29 ಅಕ್ಟೋಬರ್ 2020, 11:25 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದಲ್ಲಿ ನಡೆಯುತ್ತಿರುವ 2020ರ ಅಧ್ಯಕ್ಷೀಯ ಚುನಾವಣೆ ಅತ್ಯಂತ ದುಬಾರಿ ಚುನಾವಣೆಯಾಗಲಿದ್ದು, ಈ ಬಾರಿಯ ಚುನಾವಣಾ ಖರ್ಚು ₹1.03 ಲಕ್ಷ ಕೋಟಿ(14 ಬಿಲಿಯನ್‌ ಡಾಲರ್‌) ತಲುಪುವ ಸಾಧ್ಯತೆ ಇದೆ. ಇದು ಹಿಂದಿನ ಚುನಾವಣೆಗಿಂತ ದುಪ್ಪಟಾಗಿದೆ ಎಂದು ಸಂಶೋಧಕರ ತಂಡವೊಂದು ಹೇಳಿದೆ.

ಚುನಾವಣಾ ಪ್ರಚಾರದ ಅಂತಿಮ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಅಸಾಧಾರಣ ಪ್ರಮಾಣದಲ್ಲಿ ರಾಜಕೀಯ ದೇಣಿಗೆ ಹರಿದುಬರುತ್ತಿದೆ. ಚುನಾವಣೆ ಆರಂಭದಲ್ಲಿ ಅಧ್ಯಕ್ಷೀಯ ಚುನಾವಣೆ ವೆಚ್ಚ ₹81439 ಕೋಟಿ( 11 ಬಿಲಿಯನ್‌ ಡಾಲರ್‌) ಎಂದು ಅಂದಾಜಿಸಲಾಗಿತ್ತು. ಆದರೆ ಈಗಾಗಲೇ ಚುನಾವಣಾ ವೆಚ್ಚ ಈ ಮೊತ್ತವನ್ನು ದಾಟಿದೆ ಎಂದು ಸೆಂಟರ್‌ ಫಾರ್‌ ರೆಸ್ಪಾನ್ಸಿವ್‌ ಪಾಲಿಟಿಕ್ಸ್‌ ತಿಳಿಸಿದೆ.

ಈಗಾಗಲೇ ಚುನಾವಣಾ ಪ್ರಚಾರಕ್ಕಾಗಿರುವ ಖರ್ಚನ್ನು ಗಮನಿಸಿದರೆ, 2020ನೇ ಅಧ್ಯಕ್ಷೀಯ ಚುನಾವಣೆಯ ಒಟ್ಟು ಖರ್ಚು ₹1.03 ಲಕ್ಷ ಕೋಟಿ(14 ಬಿಲಿಯನ್‌ ಡಾಲರ್‌) ಆಗುವ ಸಾಧ್ಯತೆ ಎಂದು ಕೇಂದ್ರ ಲೆಕ್ಕಚಾರ ಹಾಕಿದೆ.

ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರು ದಾನಿಗಳಿಂದ₹7403 ಕೋಟಿ(1 ಬಿಲಿಯನ್‌ ಡಾಲರ್‌) ಸ್ವೀಕರಿಸಿದ ಮೊದಲ ಅಭ್ಯರ್ಥಿಯಾಗಿದ್ದಾರೆ. ಇನ್ನೊಂದೆಡೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ದಾನಿಗಳಿಂದ ₹4412 ಕೋಟಿ (596 ಮಿಲಿಯನ್‌ ಡಾಲರ್‌) ಪಡೆಯುವಲ್ಲಿ ಸಫಲರಾಗಿದ್ದಾರೆ.

ಅ.14 ರ ವೇಳೆ ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ₹6946 ಕೋಟಿ (938 ಮಿಲಿಯನ್‌ ಡಾಲರ್‌) ವೆಚ್ಚವಾಗಿತ್ತು.

‘ಕೋವಿಡ್‌ ಪಿಡುಗಿನ ನಡುವೆಯೂ ಹಲವರು ದೇಣಿಗೆ ನೀಡುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಗೆ ಸಣ್ಣ ಮೊತ್ತದ ದೇಣಿಗೆ ಮತ್ತು ಕೋಟ್ಯಧಿಪತಿಗಳು ದೊಡ್ಡ ಮೊತ್ತವನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ದೇಣಿಗೆ ನೀಡುವಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ’ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT