ಮಂಗಳವಾರ, ಜೂನ್ 28, 2022
23 °C

ಇಂಡೊನೇಷ್ಯಾ: ದೋಣಿ ಮುಳುಗಿ 26 ಮಂದಿ ನಾಪತ್ತೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಜಕಾರ್ತ: ಇಂಡೊನೇಷ್ಯಾದ ಕರಾವಳಿಯಲ್ಲಿ ಹವಾಮಾನ ವೈಪರೀತ್ಯ ಮತ್ತು ಇಂಧನ ಖಾಲಿಯಾದ ಪರಿಣಾಮ ದೋಣಿ ಮುಳುಗಿ, 26 ಮಂದಿ ಶನಿವಾರ ಕಾಣೆಯಾಗಿದ್ದಾರೆ. 

43 ಮಂದಿ ಪ್ರಯಾಣಿಕರಿದ್ದ ದೋಣಿ ಸುಲವೇಸಿ ಮತ್ತು ಬೊರ್ನಿಯೊ ದ್ವೀಪಗಳನ್ನು ಪ್ರತ್ಯೇಕಿಸುವ ಮಕಸ್ಸಾರ್ ಜಲಸಂಧಿಯಲ್ಲಿ ಗುರುವಾರವೇ ಮುಳುಗಿತ್ತು. ಆದರೆ, ಈ ಮಾಹಿತಿ ರಕ್ಷಣಾ ಅಧಿಕಾರಿಗಳಿಗೆ ಶನಿವಾರ ಲಭಿಸಿದೆ.

‘ಅದೇ ಮಾರ್ಗದಲ್ಲಿ ಹಾದು ಹೋಗುತ್ತಿದ್ದ ಎರಡು ರಕ್ಷಣಾ ದೋಣಿಗಳಿಂದ (ಟಗ್‌ ಬೋಟ್‌) 17 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ. ನಾಪತ್ತೆಯಾದವರಿಗೆ ರಕ್ಷಣಾ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು