ಇಂಡೋನೇಷ್ಯಾ ಜ್ವಾಲಾಮುಖಿ: ಇನ್ನೂ 27 ಮಂದಿ ನಾಪತ್ತೆ

ಸಂಬರ್‌ವುಲು (ಇಂಡೋನೇಷ್ಯಾ): ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಸಂಭವಿಸಿದ ಬಹುದೊಡ್ಡ ಜ್ವಾಲಾಮುಖಿಯ ಅವಶೇಷಗಳ ಅಡಿಯಿಂದ 13 ವರ್ಷದ ಬಾಲಕನ ಮೃತದೇಹ ಹೊರತೆಗೆಯಲಾಗಿದ್ದು, ಮೃತರ ಸಂಖ್ಯೆ 15ಕ್ಕೆ ಏರಿದೆ. ಇನ್ನೂ 27 ಮಂದಿ ನಾಪತ್ತೆಯಾಗಿದ್ದಾರೆ.
ಪೂರ್ವ ಜಾವಾ ಪ್ರಾಂತ್ಯದ ಜುಮಜಂಗ್ ಜಿಲ್ಲೆಯ ಸೆಮೆರು ಪರ್ವತದಲ್ಲಿ ಈ ಜ್ವಾಲಾಮುಖಿ ಸ್ಫೋಟಿಸಿತ್ತು. ಲಾವಾರಸದಿಂದ ಉತ್ಪತ್ತಿಯಾದ ಬೂದಿ 12 ಸಾವಿರ ಮೀಟರ್‌ನಷ್ಟು (40 ಸಾವಿರ ಅಡಿ) ಎತ್ತರಕ್ಕೆ ಚಿಮ್ಮಿತ್ತು.
ತೀವ್ರ ಸುಟ್ಟ ಗಾಯಗಳೊಂದಿಗೆ 56 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತದಲ್ಲಿ 3 ಸಾವಿರಕ್ಕೂ ಅಧಿಕ ಮನೆಗಳು ಮತ್ತು 38 ಶಾಲೆಗಳು ಹಾನಿಗೊಂಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.