ಬುಧವಾರ, ಅಕ್ಟೋಬರ್ 20, 2021
29 °C

90 ದಿನಗಳ ನಂತರ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯತ್ತ ಹೊರಟ ಚೀನಾ ಗಗನಯಾತ್ರಿಕರು

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಬಾಹ್ಯಾಕಾಶ ನಿಲ್ದಾಣ ನಿರ್ಮಾಣ, ದುರಸ್ತಿ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಮೂರು ತಿಂಗಳ ಹಿಂದೆ ಬಾಹ್ಯಾಕಾಶಕ್ಕೆ ತೆರಳಿದ್ದ ಚೀನಾದ ಮೂವರು ಗಗನಾಯತ್ರಿಗಳು ಗುರುವಾರ ಭೂಮಿಯತ್ತ ಹೊರಟಿದ್ದಾರೆ.

90 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿದ್ದ ನೀ ಹೈಶೆಂಗ್‌, ಲಿಯು ಬೊಮಿಂಗ್‌ ಮತ್ತು ಟ್ಯಾಂಗ್‌ ಹಾಂಗೊ ಗಗನಯಾತ್ರಿಗಳು ಗುರುವಾರ ಬೆಳಿಗ್ಗೆ 8.56ಕ್ಕೆ (0056 ಜಿಎಂಟಿ)ಕ್ಕೆ ಶೆನ್‌ಶಾವ್‌–12 ಗಗನ ನೌಕೆ ಮೂಲಕ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿದ್ದಾರೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಗಗನಯಾತ್ರಿಗಳು ಬಾಹ್ಯಾಕಾಶ ನೌಕೆಯೊಳಗೆ ಪ್ಯಾಕೇಜ್‌ಗಳನ್ನು ಭದ್ರಪಡಿಸುವ ದೃಶ್ಯಗಳನ್ನು ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟರ್ ಸಿಸಿಟಿವಿ ಪ್ರಸಾರ ಮಾಡಿದೆ. ಬಾಹ್ಯಾಕಾಶದಿಂದ ಹೊರಡುವ ಈ ಗಗನ ನೌಕೆ ಶುಕ್ರವಾರ ಜಿಯುಕ್ವಾನ್ ಉಡಾವಣಾ ಕೇಂದ್ರದ ಸಮೀಪವಿರುವ ಗೋಬಿ ಮರುಭೂಮಿಯಲ್ಲಿ ಇಳಿಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು